ಪ್ರೋಬಯೊಟಿಕ್ ಆಹಾರಗಳ ಮಹತ್ವ ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುವುದು

ಪ್ರೋಬಯೊಟಿಕ್ ಆಹಾರಗಳ ಮಹತ್ವ ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುವುದು

ಪ್ರೋಬಯೊಟಿಕ್ ಆಹಾರಗಳ ಮಹತ್ವ ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುವುದು

ಪ್ರೊಬಯೋಟಿಕ್‌ ಬ್ಯಾಕ್ಟೀರಿಯಗಳು ನಮ್ಮ ದೇಹದಲ್ಲಿರುವ  ಉತ್ತಮ ಮತ್ತು ಸ್ನೇಹಮಯಿ  ಬ್ಯಾಕ್ಟೀರಿಯಗಳಾಗಿದ್ದು,  ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ.

ನಮ್ಮ ದೇಹದಲ್ಲಿ  ಸ್ನೇಹಮಯಿ ಬ್ಯಾಕ್ಟೀರಿಯಾಗಳು ಮಾತ್ರವಲ್ಲದೆ ನಮ್ಮ ದೇಹಕ್ಕೆ ಮಾರಕವಾದ ಬ್ಯಾಕ್ಟೀರಿಯಾಗಳು ಸಹ ಇರುತ್ತವೆ. ನಾವು ಸೇವಿಸುವ ಆಹಾರವು ಇಂತಹ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನಾವು ಒಳ್ಳೆಯ ಆಹಾರವನ್ನು ತೆಗೆದುಕೊಂಡಾಗ ಉತ್ತಮ ಜಾತಿಯ ಬ್ಯಾಕ್ಟೀರಿಯ ನಮ್ಮ ಕರಳಿನಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಮಾರಕವಾದ ಆಹಾರವನ್ನು ತೆಗೆದುಕೊಂಡಾಗ ಕೆಟ್ಟ ಬ್ಯಾಕ್ಟೀರಿಯಾಗಳು ನಮ್ಮ ಕರುಳಿನಲ್ಲಿ  ಬೆಳೆಯಲು ಅವಕಾಶವಾಗುತ್ತದೆ ಮತ್ತು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಕರುಳಿನಲ್ಲಿ ಮಿಲಿಯನ್‌ ಗಟ್ಟಲೆ ನ್ಯೂರಾನ್‌ಗಳಿದ್ದು, ಇದನ್ನು ನಮ್ಮ ದೇಹದ ಎರಡನೆ ಮೆದುಳು ಎಂದು ಕರೆಯಲಾಗುತ್ತದೆ.  ಆದ್ದರಿಂದ ನಾವುಗಳು ಪೌಷ್ಠಿಕ ಮತ್ತು ಪ್ರೋಬಯೋಟಿಕ್‌ ಆಹಾರಗಳನ್ನು ಸೇವಿಸಿದರೆ ನಮ್ಮ ಕರುಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.

ಪ್ರೋಬಯೋಟಿಕ್‌ ಆಹಾರಗಳ ಮಹತ್ವ

* ನಾವು ಪ್ರೋಬಯೋಟಿಕ್‌ ಆಹಾರವನ್ನು ಸೇವಿಸಿದಾಗ ಕರುಳಿನಲ್ಲಿ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಕೆಟ್ಟ ಬ್ಯಾಕ್ಟೀರಿಯಗಳ ಸಂತತಿಯನ್ನು ಕಡಿಮೆ ಮಾಡುತ್ತವೆ ಹಾಗೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

* ಕರುಳಿನ ಮತ್ತು ಮೂತ್ರಕೋಶದ ಕ್ಯಾನ್ಸರ್‌ ಅನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿವೆ

* ಮಹಿಳೆಯರ ಜನಾನಂಗಕ್ಕೆ ಆಗುವ ಯೀಸ್ಟ್‌ ಸೋಂಕನ್ನು ತಡೆಗಟ್ಟುತ್ತದೆ.

* ಗಜಕರ್ಣ ಅಥವಾ ಕಜ್ಜಿಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

* ಧೀರ್ಘಕಾಲೀನ ಖಾಯಿಲೆಗಳ ಚಿಕಿತ್ಸೆಗೆ ಉಪಯೋಗಿಸುವ ಆಂಟಿಬಯೋಟಿಕ್‌ಗಳು ನಮ್ಮ ಜೀರ್ಣಕ್ರಿಯೆಯಲ್ಲಿ ತೊಂದರೆ ಮಾಡುತ್ತದೆ. ಇಂತಹ ಸಮಯದಲ್ಲಿ ಪ್ರೋಬಯೋಟಿಕ್‌ ಆಹಾರಗಳ ಸೇವನೆಯಿಂದ ನಮ್ಮ ಜೀರ್ಣಾಂಗ ಕ್ರಿಯೆಯನ್ನು ಸರಿದೂಗಿಸಿಕೊಳ್ಳಬಹುದು.

ಇಷ್ಟೆಲ್ಲಾ ಉಪಯೋಗಗಳಿರುವ ಪ್ರೋಬಯೋಟಿಕ್‌ ಆಹಾರಗಳನ್ನು ನಮ್ಮ ಜೀವನದಲ್ಲಿ ಈ ಕೆಳಕಂಡ ಆಹಾರಗಳ ಮೂಲಕ ಅಳವಡಿಸಿಕೊಳ್ಳಬಹುದು.

1. ಮೊಸರು

ಮೊಸರು ಕ್ಯಾಲ್ಸಿಯಂ,ಪಾಸ್ಫರಸ್‌ ಮತ್ತು ವಿಟಮಿನ್‌ ಬಿ 12 ನ ಉತ್ತಮ ಮೂಲವಾಗಿದೆ. ಅಲ್ಲದೆ ಇದು ಕಬ್ಬಿಣ, ಪೊಟ್ಯಾಸಿಯಮ್‌ ಮತ್ತು ವಿಟಮಿನ್‌ ಬಿ6 ನಲ್ಲಿ ಸಮೃದ್ಧವಾಗಿದೆ. ಇದೊಂದು ಉತ್ತಮ ಪ್ರೋಬಯೋಟಿಕ್‌ ಆಹಾರ ಪದಾರ್ಥ. ಕರುಳಿನಲ್ಲಿ ಉತ್ತಮ ಮತ್ತು ದೇಹಕ್ಕೆ ಅನುಕೂಲಕಾರಿಯಾದ ಬ್ಯಾಕ್ಟಿರಿಯಾಗಳ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಸ್ಥವಾಗಿರಿಸುತ್ತದೆ. ಆದ್ದರಿಂದಲೇ  ಊಟದ ಕೊನೆಯಲ್ಲಿ ಮೊಸರನ್ನದ ಸೇವನೆಯು ನಮ್ಮ ದಕ್ಷಿಣ ಭಾರತದ ಜನರಿಗೆ ರೂಢಿಗತವಾಗಿ ಬಂದಿದೆ.

2. ಹುದುಗಿಸಿದ ಆಹಾರಗಳು (Fermented foods)

ಹುದುಗಿಸಿದ ಆಹಾರಗಳು ನಮ್ಮ ಜೀರ್ಣಕ್ರಿಯೆಯಲ್ಲಿ ಸಹಾಯಮಾಡುತ್ತದೆ. ಇವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಈ ಮೂಲಕ ಅಗತ್ಯವಾದ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಿ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಹುದುಗಿಸಿದ ಆಹಾರಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಯೀಸ್ಟ್‌ ನಮ್ಮ ದೇಹದಲ್ಲಿ ಅನಗತ್ಯ ಬ್ಯಾಕ್ಟೀರಿಯಗಳ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ನಾವು ಉಪಹಾರದಲ್ಲಿ ಸೇವಿಸುವ ಇಡ್ಲಿ, ದೋಸೆ, ಡೋಕ್ಲ ಹುದುಗಿಸಿದ ಆಹಾರಗಳಿಗೆ ಉದಾಹರಣೆಯಾಗಿವೆ.

3. ಉಪ್ಪು ನೀರಿನ ದ್ರಾವಣದಲ್ಲಿ ಸಂಗ್ರಹಿಸಿಟ್ಟ ಆಲೀವ್‌ ಗಳು

ವಿವಿಧ ಅಧ್ಯಯನಗಳ ಪ್ರಕಾರ ಆಲೀವ್‌ ಗಳು ವಿಟಮಿನ್‌ ಇ , ಫೈಟೋನ್ಯೂಟ್ರಿಯಂಟ್‌ಗಳು  ಮತ್ತು ಆಂಟಿಆಕ್ಸಿಡೆಂಟ್‌ ನಿಂದ ಸಮೃದ್ಧವಾಗಿವೆ. ಹೀಗಾಗಿ ನೀವು ಆಲೀವ್‌ ಅನ್ನು ಅದರಲ್ಲಿಯೂ ಉಪ್ಪಿನಕಾಯಿ ಮಾಡಲಾದ ಆಲೀವ್ ಗಳನ್ನು  ಉಪಯೋಗಿಸುವುದರಿಂದ ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ದೇಹವನ್ನು ಆಕ್ಸಿಡೇಟಿವ್‌ ಒತ್ತಡದಿಂದ ಆಗುವಂತಹ ಹಾನಿಯಿಂದ ತಪ್ಪಿಸುತ್ತದೆ.

‌4. ಕೆಫೀರ್  (ಆಡಿನ ಹಾಲು ಅಥವಾ ಕೆಫಿರ್‌ ಧಾನ್ಯಗಳನ್ನು ಉಪಯೋಗಿಸಿ ತಯಾರಿಸಿದ    ಹುದುಗಿಸಿದ ಉತ್ಪನ್ನಗಳು)

ಇದೊಂದು ತುಂಬಾ ರುಚಿಕರ ಪಾನೀಯವಾಗಿದ್ದು ಇದನ್ನು ಹಾಲಿನಿಂದ ಮಾಡಲಾಗಿರುತ್ತದೆ. ಇದರಲ್ಲಿ ಉನ್ನತ ಮಟ್ಟದ ಕ್ಯಾಲ್ಸಿಯಂ, ಪ್ರೊಟೀನ್‌, ಪೊಟಾಶಿಯಂ ಮತ್ತು ಪ್ರೋಬಯೋಟಿಕ್‌ ಇರುತ್ತದೆ. ಕೆಫೀರ್‌ ಸೇವನೆಯಿಂದ ಕೊಲೆಸ್ಟ್ರಾಲ್‌, ರಕ್ತದೊತ್ತಡ ಮತ್ತು ಉರಿಯೂತ ಕಡಿಮೆಯಾಗುತ್ತದೆ.

5.ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ

ಉಪ್ಪಿನಕಾಯಿ ಕೇವಲ ರುಚಿಗಾಗಿ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು. ಇದು ಖನಿಜಾಂಶ ಮತ್ತು ವಿಟಮಿನ್ ಗಳ ಮೂಲವಾಗಿದೆ. ಇದು ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಉಪ್ಪಿನಕಾಯಿ ಸೇವನೆಯು ಪ್ರೋಬಯೋಟಿಕ್ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಇದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಉಪ್ಪಿನಕಾಯಿ ಸೇವನೆಯಲ್ಲಿ ಮಿತಿ ಇರಬೇಕು.

6. ಕಪ್ಪು ಚಾಕೊಲೇಟ್ಗಳು ಮತ್ತು ಪ್ರೋಬಯೋಟಿಕ್ಸ್‌ ಮಿಶ್ರಿತ ಐಸ್ ಕ್ರೀಮ್ ಗಳು

ಕಪ್ಪು ಚಾಕೊಲೇಟ್ ಗಳು ಮತ್ತು ಪ್ರೋಬಯೋಟಿಕ್ಸ್‌ ಮಿಶ್ರಿತ ಐಸ್ ಕ್ರೀಮ್ ಗಳುಸಹ ಪ್ರೋಬಯೋಟಿಕ್ ಗಳ ಆಗರವಾಗಿದೆ. ಹಾಗೆಯೇ ಯಾಕುಲ್ಟ್‌ ನಂತಹ ರೆಡಿಮೇಡ್‌ ಪ್ರೋಬಯೋಟಿಕ್ ಪಾನೀಯಗಳು ಸಹ ಸುಲಭವಾಗಿ ಪ್ರೋಬಯಾಟಿಕ್‌ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ.

ಇಂತಹ ಆಹಾರಗಳನ್ನು ನಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ಬಳಸುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ.

SUMMARY IN ENGLISH

# Probiotic  foods and their Importance

Probiotic bacteria are the good and friendly bacteria in our body that help keep our gut healthy.  Our body contains not only friendly bacteria but also harmful bacteria. The food we eat leads to the growth of such bacteria. When we eat good food,  good species of  bacteria grow in our gut. Eating sugary and  unhealthy food allows bad  bacteria to grow in our gut and adversely affect our body.There are millions of neurons in the gut. Thats why gut is called the second brain of our body.  We can keep our gut healthy if we eat nutritious and probiotic foods.

Importance of probiotic foods

When we eat probiotic foods, the healthy bacteria in the gut  reduce the bad bacteria and boost our body’s immune system.

*Helpful in preventing colon and bladder cancer

* Prevents female genital yeast infection.

* Helpful in preventing itchiness and skin infections

* When Antibiotics used in the treatment of chronic diseases disturb our digestion, eating probiotic foods can help in restoring the Gut health.

Include these probiotic foods in your Diet

1.Yoghurt or Curds

2. Kefir

3.Pickled vegetable or other pickles

4.Pickled olives

5.Ready to drink probiotic drinks like yakult

6.Probiotic ice creams

7.Fermented foods like Dosa, Idli, Dhokla,fermented curd rice or Ganji annam

 

 

best web company in tumkur

Ayushmanbhava Karnataka

error: Content is protected !!