ಆಯಾಸ ಮತ್ತು ದಣಿವು ಆಗಲು ಕಾರಣಗಳೇನು #REASONS FOR BEING TIRED ALL THE TIME

ಆಯಾಸ ಮತ್ತು ದಣಿವು ಆಗಲು ಕಾರಣಗಳೇನು  #REASONS FOR BEING TIRED ALL THE TIME

 

ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳದಿದ್ದರೂ, ಕೆಲವೊಮ್ಮೆ ನಮಗೆ ಆಯಾಸವಾಗುವುದು ಸರ್ವೇ ಸಾಮಾನ್ಯ ವಾಗಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳೂ ಕೂಡ ಸುಸ್ತು ಮತ್ತು ದಣಿವನ್ನು ಅನುಭವಿಸುವುದುಂಟು.

ಆಯಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ್ದಿರಬಹುದು ಆದ್ದರಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದು ಒಳ್ಳೆಯದು. ಇಂದಿನ ನಮ್ಮ ನಿತ್ಯದ ಬದುಕಿನಲ್ಲಿ ಒಂದು ಸಣ್ಣ ಆಯಾಸವನ್ನು ಸಹ ಕಡೆಗಣಿಸುವಂತಿಲ್ಲ ಏಕೆಂದರೆ ಇದು ಗಂಭೀರ ಖಾಯಿಲೆಯ ಲಕ್ಷಣವಾಗಿರಬಹುದು ಕೂಡ.

ಆಯಾಸದ ಕಾರಣಗಳು:

ಸರಿಯಾದ ಸಮತೋಲಿತ ಆಹಾರ ತೆಗೆದುಕೊಳ್ಳದಿರುವುದು

ಸಮತೋಲಿತ ಮತ್ತು ಪೌಷ್ಟಿಕ ಆಹಾರದ ಕೊರತೆಯು ಆಯಾಸಕ್ಕೆ ಒಂದು ಮುಖ್ಯ ಕಾರಣವಾಗಿದೆ. ಆದ್ದರಿಂದ ನಮ್ಮ ದಿನ ನಿತ್ಯದ ಆಹಾದಲ್ಲಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಪ್ರೋಟೀನ್‌ ಹೆಚ್ಚಿರುವ ಪದಾರ್ಥಗಳು ಮತ್ತು ಹಾಲು, ಮೊಸರು, ತುಪ್ಪವನ್ನು ಸೇವಿಸುವುದನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಡೈರಿ ಉತ್ಪನ್ನಗಳು ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ಇವು ನಮ್ಮ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬಿನ(Good cholestrol) ಅಂಶಗಳನ್ನು ನೀಡುತ್ತವೆ.

ದೇಹಕ್ಕೆ ಅಗತ್ಯವಾಗಿ ಬೇಕಾದ ನಿದ್ರೆ ಮಾಡದಿರುವುದು (ನಿದ್ರಾಹೀನತೆ).

ನಿದ್ರಾಹೀನತೆಯು ಆಯಾಸಕ್ಕೆ ಕಾರಣವಾಗುತ್ತದೆ. ಪ್ರತಿ ವ್ಯಕ್ತಿಗೆ 7 ರಿಂದ 8 ಘಂಟೆಗಳ  ನಿದ್ರೆಯ ಅವಶ್ಯಕತೆ ಇದೆ. ನಿದ್ರೆಯ ಕೊರತೆಯು ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಏಕಾಗ್ರತೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಆಯಾಸ ದಣಿವು ಹೆಚ್ಚಾಗುತ್ತದೆ.

ಮೆಗ್ನೀಸಿಯಮ್‌ ಕೊರತೆ

     ಮೆಗ್ನೀಸಿಯಮ್‌ ಕೊರತೆಯಿಂದ ಆಯಾಸದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಮೆಗ್ನೀಸಿಯಮ್‌ ಇರುವ ಸಾಕಷ್ಟು ಹಸಿರು ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಬಾದಾಮಿ, ಗೋಡಂಬಿ, ಸೋಯಾಬೀನ್, ಎಳ್ಳು, ಬಾಳೆಹಣ್ಣು, ಮೀನು, ಅವಕಾಡೊ, ಗೋಧಿ, ಧಾನ್ಯಗಳು ಇಂತಹ ಪದಾರ್ಥಗಳಲ್ಲಿ ಮೆಗ್ನೀಸಿಯಮ್‌ ಇರುವ ಕಾರಣ ಇವುಗಳ ಸೇವನೆ ಮಾಡುವುದು ಒಳ್ಳೆಯದು. ಮೆಗ್ನಿಸಿಯಮ್‌ ಕೊರತೆಯು ಮಾನಸಿಕ ಆಯಾಸಕ್ಕೆ ಕಾರಣವಾಗುತ್ತದೆ ಹಾಗೂ ಖಿನ್ನತೆ ಸಹ  ಉಂಟುಮಾಡುತ್ತದೆ.

ಔಷಧಿಗಳ ಅಡ್ಡ ಪರಿಣಾಮಗಳು

ಆಯಾಸವು ಕೆಲವು ಔಷಧಿಗಳ ಅಡ್ಡ ಪರಿಣಾಮವಾಗಿರಬಹುದು. ಉದಾಹರಣೆಗೆ ಲಿಥಿಯಂ  (ಮಾನಸಿಕ ಖಾಯಿಲೆಗಳಿಗೆ ಬಳಸುವ ಔಷಧಿಗಳು), ಬೀಟಾಬ್ಲಾಕರ್ಗಗಳು (ಬಿಪಿ ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಗೆ ಬಳಸುವ ಔಷಧಿಗಳು) ಮತ್ತು ಅನೇಕ ಕ್ಯಾನ್ಸರ್‌ ಚಿಕಿತ್ಸೆಗಳು, ಅದರಲ್ಲಿಯೂ ಕೀಮೊಥೆರಪಿ ಮತ್ತು ರೇಡಿಯೋ ಥೆರಪಿ.

ಥೈರಾಯ್ಡ ಗ್ರಂಥಿಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು.

ನಿತ್ಯದ ಚಟುವಟಿಕೆಗಳು ಸೂಕ್ತವಾಗಿ ಕಾರ್ಯ ನಿರ್ವಹಿಸಬೇಕಾದರೆ ಥೈರಾಡ್‌ ಗ್ರಂಥಿಯು ರಸದೂತಗಳನ್ನು ಸ್ರವಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಥೈರಾಯಿಡ್‌ ಗ್ರಂಥಿಯ ಕ್ಷಮತೆ ಕುಂದಿದ್ದರೆ ಸಾಕಷ್ಟು ಪ್ರಮಾಣದ ರಸದೂತವನ್ನು ಉತ್ಪಾದಿಸಲು ಸಾಧ್ಯವಾಗದೆ ಅಥವಾ ನಿಯಂತ್ರಣಕ್ಕೆ ಸಿಗದ ಹೆಚ್ಚಿನ  ಪ್ರಮಾಣದಲ್ಲಿ ಉತ್ಪತ್ತಿಗೊಳಸಿದರೆ  ಶಕ್ತಿ ಹೀನತೆ ಮತ್ತು ಆಯಾಸವನ್ನು ಅನಭವಿಸಬೇಕಾಗುತ್ತದೆ.

ಒತ್ತಡ

ಆಯಾಸ ಮತ್ತು ದಣಿವು ಈ ಎರಡು ಅಂಶಗಳು ಪರಸ್ಪರ ನಿಕಟ ಸಂಭಂಧವನ್ನು ಹೊಂದಿವೆ ಇದಕ್ಕೆ ಒಂದು ಪ್ರಮುಖ ಕಾರಣ ಒತ್ತಡ. ಅನಾರೋಗ್ಯ, ಬಿಡುವಿಲ್ಲದ ವೃತ್ತಿಪರ ಜೀವನ, ಕೌಟುಂಬಿಕ ಘರ್ಷಣೆಗಳು, ಪ್ರೀತಿಪಾತ್ರರಿಂದ ದೂರವಾಗುವುದು ಇವೆಲ್ಲವು ಭಾವನಾತ್ಮಕ ಒತ್ತಡಕ್ಕೆ ಕಾರಣವಾಗುತ್ತದೆ. ಇಂತಹ ಭಾವನಾತ್ಮಕ ಒತ್ತಡದಿಂದಾಗಿ ಎದೆ ನೋವು, ಕೈಕಾಲು ಗಳಲ್ಲಿ ಶಕ್ತಿ ಇಲ್ಲದಂತಾಗುವುದು, ನಿಶ್ಯಕ್ತಿ, ಬಳಲಿಕೆ, ತಲೆನೋವು, ಬ್ರೈನ್‌ ಫಾಗ್(ಯಾವುದೇ ಕೆಲಸವನ್ನು ಪೂರ್ಣ ಗಮನದಿಂದ ಮಾಡಲು ಸಾಧ್ಯವಾಗದಿರುವುದು) ರೇಸಿಂಗ್‌ ಮೈಂಡ್(ನಿಮ್ಮ ಮನಸ್ಸಿನಲ್ಲಿ ನಿರಂತರವಾಗಿ ಬೇರೆ ಬೇರೆ ಆಲೋಚನೆಗಳು ಬಂದು ನಿಮ್ಮನ್ನು ನೀವು ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಆಗದಿರುವುದು) ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗದಿರುವುದು ಇವೆಲ್ಲ ಒತ್ತಡದ ಲಕ್ಷಣಗಳಾಗಿವೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಲವು ಮಾರ್ಗಗಳಿದ್ದು, ನಿಮಗೆ ಯಾವುದು ಸೂಕ್ತವೋ ಅದನ್ನು ರೂಢಿಸಿಕೊಳ್ಳಬಹುದು.

ನಿರ್ಜಲೀಕರಣ

ಸಾಕಷ್ಟು ನೀರು ಕುಡಿಯದೆ ದೇಹದಲ್ಲಿ ನಿರ್ಜಲೀಕರಣ ಉಂಟಾದರೆ ದಣಿವು, ಆಲಸ್ಯ ಮತ್ತು ಸುಸ್ತಾಗುತ್ತದೆ. ಆದ್ದರಿಂದ ದೇಹಕ್ಕೆ ಬೇಕಾಗುವಷ್ಟು ನೀರನ್ನು ಅಗತ್ಯವಾಗಿ ಸೇವಿಸಬೇಕು. ಬಾಯಾರಿಕೆ, ತುಟಿಗಳು ಗಂಟಲು ಮತ್ತು ಬಾಯಿ ಒಣಗುವುದು. ತಲೆ ಸುತ್ತು, ಹಳದಿ ಬಣ್ಣದ  ಮೂತ್ರ, ತಲೆ ನೋವು ಮುಂತಾದವು ನಿರ್ಜಲೀಕರಣದ ಲಕ್ಷಣಗಳಾಗಿವೆ.

ಇನ್ಸುಲಿನ್‌ ಪ್ರತಿರೋಧತೆ

ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್‌ ಎಂಬ ಹಾರ್ಮೋನು ನಮ್ಮ ಜೀನಕೋಶಗಳಿಗೆ ಸರಿಯಾದ ಪ್ರಮಾಣದಲ್ಲಿ ಗ್ಲೂಕೋಸ್‌ ಅಂಶವನ್ನು ತಲುಪಿಸಲು ಸಾಧ್ಯವಾಗುದಿರುವ ಸಂದರ್ಭದಲ್ಲಿ ಸುಸ್ತು ಆಯಾಸ ಕಂಡುಬರುತ್ತದೆ. ಇದು ಪ್ರಿ ಡಯಾಬಿಟಿಸ್‌ ಅಥವಾ ಡಯಾಬಿಟಿಸ್‌ ಆಗಿರಬಹುದು. ಸಕ್ಕರೆ ಖಾಯಿಲೆ ಗುಣಲಕ್ಷಣಗಳನ್ನು ಅರಿತು ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಜೀವನ ಶೈಲಿ

ಇಂದಿನ ಒತ್ತಡಮಯ ಬದುಕಿನಲ್ಲಿ  ನಮ್ಮ ಜೀವನ  ಶೈಲಿಯು  ಬದಲಾಗಿದ್ದು,  ದೇಹದ ಆರೋಗ್ಯದ ಕಡೆ ಸರಿಯಾಗಿ ಗಮನ ಕೊಡದಿರುವುದರ ಜೊತೆಗೆ    ಅತಿಯಾದ ಕಾಫಿ ಮತ್ತು ಟೀ ಸೇವನೆ,  ಮದ್ಯಪಾನ ಸೇವನೆ,  ರಾತ್ರಿ ಹೆಚ್ಚು ಹೊತ್ತು ಎಚ್ಚರವಾಗಿರುವುದರಿಂದ  ನಿದ್ರೆಯ ಕೊರತೆ, ಮುಂಜಾನೆ ಬೇಗ ಏಳಲು ಸ್ಯಾಧ್ಯವಾಗದೆ ಇರುವುದು,  ವ್ಯಾಯಮ ಮಾಡದೇ ಇರುವುದು, ಹೆಚ್ಚಿನ ಜಂಕ್‌ ಫುಡ್‌ ಗಳ ಸೇವೆನೆ, ಚಟುವಟಿಕೆಯಿಲ್ಲದೆ ಹೆಚ್ಚು ಸಮಯ ಒಂದೇ ಕಡೆ ಕುಳಿತಿರುವುದು.  9-5 ಟೇಬಲ್‌ ಜಾಬ್‌ ಇವೆಲ್ಲಾ ಕಾರಣಗಳಿಂದ  ಆರೋಗ್ಯದಲ್ಲಿ ವ್ಯತ್ಯಾಸವಾಗಿ ಆಲಸ್ಯ ಮತ್ತು ದಣಿವು ಹೆಚ್ಚಾಗುತ್ತದೆ.

ವ್ಯಾಯಾಮದ ಕೊರತೆ

ಹೆಚ್ಚು ಹೊತ್ತು ಕುಳಿತೇ ಮಾಡುವ ಕೆಲಸಗಳು ಶಕ್ತಿಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ. ನಿಯಮಿತ ವ್ಯಾಯಾಮದಿಂದ ಹೃದಯರಕ್ತನಾಳಗಳ ಆರೋಗ್ಯ ಮತ್ತು ಒಟ್ಟಾರೆ ಶಕ್ತಿಯ ಮಟ್ಟವು ಹೆಚ್ಚುತ್ತದೆ.

ಆರೋಗ್ಯ ಸಮಸ್ಯೆಗಳು

ರಕ್ತಹೀನತೆ, ಫೈಬ್ರೋಮಯಾಲ್ಜಿಯಾ, ಮಧುಮೇಹ, ಖಿನ್ನತೆ, ಧೀರ್ಘ ಕಾಲದ ಆಯಾಸ ಸಿಂಡ್ರೋಮ್‌  ಮುಂತಾದ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಆಯಾಸ ಉಂಟಾಗುತ್ತದೆ. ನೀವು ಧೀರ್ಘ ಕಾಲದಿಂದ ನಿರಂತರವಾಗಿ ಆಯಾಸದಿಂದ ಬಳಲುತ್ತಿದ್ದರೆ ನಿರ್ಲಕ್ಷಿಸದೆ ಕೂಡಲೇ  ವೈದ್ಯಕೀಯ ಸಲಹೆಗಳನ್ನು ಪಡೆಯುವುದು ಉತ್ತಮ.

ಧೀರ್ಘ ಕಾಲದ ಆಯಾಸ ಸಿಂಡ್ರೋಮ್‌ (Chronic fatigue syndrome)

ಇದೊಂದು ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿದ್ದು ವಿಶ್ರಾಂತಿ ಪಡೆದರೂ ಆಯಾಸ ಕಡಿಮೆಯಾಗುವುದಿಲ್ಲ ಹಾಗೂ ದೈಹಿಕ, ಮಾನಸಿಕ ಚಟುವಟಿಕೆ ಹೆಚ್ಚಿದಂತೆ  ಆಯಾಸ ಹಾಗೂ ವಿವಿಧ ರೀತಿಯ ನೋವುಗಳು ಕೂಡ ಹೆಚ್ಚುತ್ತವೆ.

ಆಯಾಸ ಕಡಿಮೆ ಮಾಡಿಕೊಳ್ಳುವುದು ಹೇಗೆ

  1. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು
  2.  ವ್ಯಾಯಾಮ ವನ್ನುದಿನನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳುವುದು
  3. ಚೆನ್ನಾಗಿ ನಿದ್ರಿಸುವುದು
  4. ಒತ್ತಡ ಕಡಿಮೆ ಮಾಡಲು ಕ್ರಮ ಕೈಗೊಳ್ಳುವುದು
  5. ರಕ್ತ ಹೀನತೆಯಿದ್ದರೆ ಸರಿಪಡಿಸಿಕೊಳ್ಳುವುದು
  6. ಸಕಾರಾತ್ಮಕ ಚಿಂತನೆಗಳು ಹಾಗೂ ವಿಶಾಲ ಮನೊಭಾವ ಹೊಂದುವುದು
  7. ದೇಹ ಮತ್ತು ಮನಸ್ಸನ್ನು ಚಟುವಟಿಕೆಯಿಂದ ಇರುವಂತೆ ಕ್ರಮ ಕೈಗೊಳ್ಳುವುದು.
  8. ಸಣ್ಣ ಪುಟ್ಟ ಖಾಯಿಲೆಗಳಿಗೆ ಔಷಧಿಗಳನ್ನು ಬಳಸದೆ ಆದಷ್ಟು  ಮನೆ ಮದ್ದುಗಳನ್ನು   ಬಳಸುವುದು.
  9. ಪೋಷಕಾಂಶ ಭರಿತ ಆಹಾರ ಸೇವನೆ
  10. ಕಾಫಿ ಮತ್ತು ಟೀ ಸೇವನೆ ಕಡಿಮೆ ಮಾಡುವುದು ಮತ್ತು ಆರೋಗ್ಯಕರ ಹಣ್ಣು ತರಕಾರಿಗಳ ರಸ  ಅಥವಾ ಸ್ಮೂದಿಗಳನ್ನು ಕುಡಿಯುವುದು
  11. ಮದ್ಯಪಾನ ಸಿಗರೆಟ್‌ ಮುಂತಾದ ವ್ಯಸನಗಳನ್ನು ತ್ಯಜಿಸುವುದು
  12. ಪ್ರಕೃತಿಯ ಮಧ್ಯೆ ಸ್ವಲ್ಪ ಸಮಯ ಕಳೆಯುವುದು
  13. ಯೋಗ ಧ್ಯಾನ ಪೂಜೆಗಳನ್ನು ಮಾಡುವುದು
  14. ಉತ್ತಮ ಸಂಗೀತ ಕೇಳುತ್ತಾ ವಿಶ್ರಾಂತಿ ಪಡೆಯುವುದು

 

SUMMARY IN ENGLISH

Even if we don’t indulge ourselves in any hectic activities, sometimes it has become normal that we feel tired.   Not just elderly people  but Women, men and even children may feel tired and fatigued due to Various reasons.

Fatigue can be related to physical and mental health̤ So it is good to get more information about it. In today’s lifestyle even a little fatigue cannot be ignored as it can be a symptom of a serious illness.

Causes of fatigue

1. Not taking a proper balanced diet

Lack of a balanced and nutritious diet is one of the main causes of fatigue. So it is good to make it a habit to consume fruits, vegetables, grains, protein rich foods and milk, curd, ghee in our daily diet.

2. Not getting the sleep that your body needs (insomnia).

Lack of sleep leads to fatigue. Every person needs 7 to 8 hours of sleep. Lack of sleep negatively affects physical health, mental health, concentration and overall health. It Impairs your ability to perform daily activities. This increases fatigue.

3. Magnesium deficiency

Symptoms of fatigue appear due to magnesium deficiency. So eat plenty of green vegetables and fruits that contain magnesium. Almonds, cashews, soybeans, sesame seeds, bananas, fish, avocados, wheat, grains are good to consume as they contain magnesium. Magnesium deficiency can also cause mental fatigue and depression.

4. Side effects of medicines

Fatigue can be a side effect of some medications. Examples include lithium (used for mental illness), beta blockers (used for BP and heart disease) and many cancer treatments, especially chemotherapy and radiotherapy.

5. Malfunctioning thyroid glands.

The thyroid gland needs to secrete hormones in order for daily activities to function properly. If your thyroid gland is underactive, unable to produce enough hormones, or producing too much, you may experience low energy and fatigue.

8. Stress

Busy professional life, family conflicts, separation from loved ones all lead to emotional stress. Such emotional stress can cause chest pain, weakness in limbs, exhaustion, fatigue, headache, a racing mind (constantly different thoughts come into your mind and you can’t engage yourself in any work) inability to concentrate are all symptoms of stress. There are many ways to reduce stress and you can adopt the ones that works for you.

7. Dehydration

Dehydration without drinking enough water can lead to fatigue and lethargy. So it is necessary to consume as much water as the body needs. Symptoms of dehydration include dizziness, Thirst, dryness of lips, throat and mouth,  dark urine, headache etc

10. Insulin resistance

Fatigue occurs when the hormone insulin produced in our body is unable to deliver the right amount of glucose to our cells. It can be pre-diabetes or diabetes. It is good to know the characteristics of diabetes and get tested if you are symptomatic.

9. Lifestyle

In today’s stressful life we are not  paying proper attention to our health. Excessive coffee and tea consumption, sugary sodas and alcohol consumption, lack of sleep due to staying up late at night, not being able to wake up early in the morning, not exercising, eating lot of junk food, sedantary lifestyle. All of these cause lethargy and fatigue.

10. Lack of physical activity

Prolonged sitting and sedentary lifestyle cause lethargy and fatigue . Regular exercise improves cardiovascular health and overall energy levels.

11. Health problems

Fatigue also occurs when there are health problems such as anemia, fibromyalgia, diabetes, depression, chronic fatigue syndrome, etc.

If you suffer from persistent fatigue for a long time, it is better to seek medical advice without neglecting it.

How to reduce fatigue

1. Adopting a healthy lifestyle

2. Sleeping well

3. Taking action to reduce stress

4. Correction of anemia and other health condition

5. Having positive mindset and positive attitude

6. Exercising, Staying healthy and fit

7. Using home remedies as much as possible without using drugs for minor ailments.

8. Consuming nutritious food including nuts and seeds

9. Reduce coffee and tea consumption and drink healthy smoothies

10. Giving up on  addictions like alcohol and cigarettes

11. Spend some time in nature and greenery

12. Doing Yoga, Meditation and mindfullness

13. Listening to music and keeping mind relaxed

 

 

best web company in tumkur

Ayushmanbhava Karnataka

error: Content is protected !!