21 ದಿನಗಳ ನೋ ಶುಗರ್ ಚಾಲೆಂಜ್ ನ ಪ್ರಯೋಜನಗಳು# NO SUGAR CHALLENGE
21 ದಿನಗಳ ನೋ ಶುಗರ್ ಚಾಲೆಂಜ್ ನ ಪ್ರಯೋಜನಗಳು# NO SUGAR CHALLENGE
21 ದಿನಗಳ ನೋ ಶುಗರ್ ಚಾಲೆಂಜ್ನಲ್ಲಿ ಭಾಗವಹಿಸುವುದರಿಂದ ನಮ್ಮ ಆರೋಗ್ಯದಲ್ಲಿ ಈ ಕೆಳಕಂಡ ಬದಲಾವಣೆಗಳು ಆಗುತ್ತವೆ.
- ಹೆಚ್ಚಿನ ಸಕ್ಕರೆಯ ಆಹಾರಗಳು ಮೂಡ್ ಸ್ವಿಂಗ್, ಆತಂಕ ( anxiety) ಮತ್ತು ಖಿನ್ನತೆಗೆ (depression) ಕಾರಣವಾಗುತ್ತವೆ. ಶುಗರ್ ಕ್ರ್ಯಾಶ್ ನಂತರ ಸುಸ್ತು ಆಯಾಸವಾಗಿ ಯಾವ ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ. ಆದ್ದರಿಂದ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿದರೆ ದಿನಪೂರ್ತಿ ಆಯಾಸವಿಲ್ಲದೆ ಕೆಲಸ ಕಾರ್ಯಗಳನ್ನು ಮಾಡಬಹುದು. ದಿನವೂ Productive ಆಗಿರುತ್ತದೆ.
- ಸಕ್ಕರೆಯನ್ನು ಕಡಿತಗೊಳಿಸುವುದರಿಂದ ಚರ್ಮದ ಮತ್ತು ಕೂದಲಿನ ಆರೋಗ್ಯ ಹೆಚ್ಚುತ್ತದೆ. ಹೆಚ್ಚಿನ ಸಕ್ಕರೆ ಸೇವನೆಯು ಮೊಡವೆಗಳು ಮತ್ತು ಚರ್ಮದ ಸುಕ್ಕುಗಳಿಗೆ ಕಾರಣವಾಗುತ್ತದೆ. ಎರಡು ವಾರಗಳಲ್ಲಿ ಚರ್ಮದ ಮತ್ತು ಕೂದಲಿನ ಹೊಳಪನ್ನು ಮರಳಿ ಪಡೆಯಬಹುದು.
- ಹೆಚ್ಚಿನ ಸಿಹಿ ಸೇವನೆಯನ್ನು ಕಡಿಮೆ ಮಾಡುವುದರಿಂದ ಉರಿಯೂತವನ್ನು (Inflammation) ಕಡಿಮೆ ಮಾಡಬಹುದು . ಹಾಗಾಗಿ ದೇಹದ ವಿವಿಧ ರೀತಿಯ ನೋವುಗಳು ಕಡಿಮೆಯಾಗುತ್ತವೆ.
- ಕಡಿಮೆ ಕ್ಯಾಲೊರಿ ಆಹಾರ ಸೇವನೆಯಿಂದ ಹೆಚ್ಚು ತೂಕವಿದ್ದರೆ ಕಡಿಮೆಯಾಗುತ್ತದೆ. ಮುಖದಲ್ಲಿ ತೇಜಸ್ಸು ಹೆಚ್ಚುತ್ತದೆ.
- ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳನ್ನು ಕಡಿಮೆ ಮಾಡುವುದರಿಂದ ದೇಹದ ಶಕ್ತಿಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಒಳಗೊಂಡ ಆಹಾರಗಳ ಸೇವನೆಯು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ನೀವು ಹೆಚ್ಚು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ.
21 ದಿನಗಳ ನೋ ಶುಗರ್ ಚಾಲೆಂಜ್ನಲ್ಲಿ ಭಾಗವಹಿಸುವಾಗ ಈ ರೀತಿಯ ಆಹಾರಗಳನ್ನು ಸಾಮಾನ್ಯವಾಗಿ ನಿರ್ಬಂಧಿಸಲಾಗುತ್ತದೆ
- ಸಿಹಿಕಾರಕಗಳು ಪದಾರ್ಥಗಳು: ಸಕ್ಕರೆ, ಜೇನುತುಪ್ಪ, ಶುಗರ್ ಸಿರಪ್, ಜಾಮ್, ಜೆಲ್ಲಿ
- ಸಿಹಿಯಾದ ಪಾನೀಯಗಳು: ಸೋಡಾ, ಸಿಹಿಯಾದ ಸ್ಮೂಥಿಗಳು, ಸಿಹಿಯಾದ ಪಾನೀಯಗಳು. ಸಕ್ಕರೆ ಸೇರಿಸಿದ ಕಾಫಿ, ಟೀ, ಕ್ರೀಡಾ ಪಾನೀಯಗಳು.
- ಸಕ್ಕರೆ ಸೇರಿಸಿದ ಕಾಂಡಿಮೆಂಟ್ಸ್: ಕೆಚಪ್, ಸಾಸ್, ಕ್ರೀಮ್
- ಸಿಹಿಗೊಳಿಸಿದ ಡೈರಿ ಉತ್ಪನ್ನಗಳು: ಫ್ಲೇವರ್ಡ್ ಮೊಸರು, ಐಸ್ ಕ್ರೀಮ್, ಚಾಕೊಲೇಟ್, ಸಿಹಿ ಹಾಲು
- ಬೇಕರಿ ಪದಾರ್ಥಗಳು: ಕುಕೀಸ್, ಕೇಕ್, ಡೊನಟ್ಸ್, ಸಕ್ಕರೆ ಸೇರಿಸಿದ ಬ್ರೆಡ್ ಮುಂತಾದವು
- ಕ್ಯಾಂಡಿ: ಚಾಕೊಲೇಟ್, ಮಿಠಾಯಿಗಳು,
- ಸಕ್ಕರೆ ಆಲ್ಕೊಹಾಲ್ ನಂತಹ ಪಾನೀಯಗಳು: ಮಿಶ್ರ ಸಿಹಿ ಪಾನೀಯಗಳು, ಸಿಹಿಯಾದ ಮದ್ಯ, ಸಾಫ್ಟ್ ಡ್ರಿಂಕ್ ಗಳು
21 ದಿನಗಳ ನೋ ಶುಗರ್ ಚಾಲೆಂಜ್ನಲ್ಲಿ ಈ ಕೆಳಕಂಡ ಆಹಾರಗಳನ್ನು ಹೆಚ್ಚು ಉಪಯೋಗಿಸಿ:-
- ಸೊಪ್ಪು ತರಕಾರಿಗಳು ಮತ್ತು ಹಣ್ಣುಗಳು, ಬಾದಾಮಿ, ಗೋಡಂಬಿ, ಪಿಸ್ತಾ ಮುಂತಾದ ಒಣಹಣ್ಣುಗಳು
- ಪ್ರೋಟೀನ್ : ಕೋಳಿ, ಮೀನು, ಮೊಟ್ಟೆ, ಸೋಯಾ, ಪನೀರ್, ಮಶ್ರೂಮ್, ರಾಜ್ಮ ಕಾಳು, ಕಾಬೂಲ್ ಕಡಲೆ ಮುಂತಾದವು
- ಆರೋಗ್ಯಕರ ಕೊಬ್ಬಿನ ಮೂಲಗಳು: ಮೊಟ್ಟೆಯ ಹಳದಿ, ಆವಕಾಡೊ, ಕುಂಬಳಬೀಜ, ಸೂರ್ಯಕಾಂತಿಬೀಜ, ಫ್ಲಾಕ್ಸ್ ಅಥವಾ ಅಗಸೆ, ಕಡ್ಲೆಬೀಜ ಮುಂತಾದ ವಿವಿಧ ಬೀಜಗಳು, ತುಪ್ಪ, ಆಲಿವ್ ಎಣ್ಣೆ, ಸಿಹಿಗೊಳಿಸದ ಮೊಸರು, ಇತ್ಯಾದಿ.
- ಕಾರ್ಬ್ ಮೂಲಗಳು: ಅಕ್ಕಿ, ರಾಗಿ , ಗೋಧಿ, ಬ್ರೌನ್ ರೈಸ್, ಇತ್ಯಾದಿ
- ಸಿರಿಧಾನ್ಯಗಳು
ಕಾಫಿ, ಟೀ, ಹಾಲು, ಜ್ಯೂಸ್ ಗೆ ಸಕ್ಕರೆ ಬದಲು ಕೃತಕ ಸಿಹಿಗಳನ್ನು ಮಿತವಾಗಿ ಉಪಯೋಗಿಸಬಹುದು ಅಥವಾ ಜೇನುತುಪ್ಪ ಮತ್ತು ನಿಂಬೆ ಸೇರಿಸಿದ ಗ್ರೀನ್ ಟೀ ಆದರೆ ಇನ್ನೂ ಉತ್ತಮ.