ಜಂಕ್ ಫುಡ್ ತಿನ್ನುವುದರ ದುಷ್ಪರಿಣಾಮಗಳು # ILL EFFECTS OF EATING JUNK FOOD :-

ಜಂಕ್ ಫುಡ್ ತಿನ್ನುವುದರ ದುಷ್ಪರಿಣಾಮಗಳು # ILL EFFECTS OF EATING JUNK FOOD :-

ಜಂಕ್ ಫುಡ್ ತಿನ್ನುವುದರ ದುಷ್ಪರಿಣಾಮಗಳು # ILL EFFECTS OF EATING JUNK FOOD:-

ಜಂಕ್ ಫುಡ್‌  ಅಥವಾ ಫಾಸ್ಟ್‌ ಫುಡ್‌ ತಿನ್ನುವುದನ್ನು ಕಡಿಮೆ ಮಾಡುವುದು ಹೇಗೆ ಎಂದು ಯೋಚಿಸುವ ಮುನ್ನ ಇಂತಹ ಆಹಾರಗಳ ಸೇವನೆ ನಮ್ಮ ಆರೋಗ್ಯದ ಮೇಲೆ ಎಷ್ಟೆಲ್ಲಾ ಕೆಟ್ಟ ಪರಿಣಾಮ ಬೀರುತ್ತವೆ ಮತ್ತು ಅವುಗಳ ತಯಾರಿಕೆಯಲ್ಲಿ ಬಳಸಲಾಗುವ ರಾಸಯನಿಕಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಜಂಕ್ ಫುಡ್‌ಗಳ ರುಚಿ, ಬಣ್ಣ ಮತ್ತು ಅದನ್ನು ಮಾರುವವರು ಇಂತಹ ತಿಂಡಿಗಳನ್ನು ಅಲಂಕರಿಸುವ ರೀತಿ ಪ್ರಪಂಚದಾದ್ಯಂತದ ಅನೇಕ ಜನರನ್ನು ಅತಿಯಾಗಿ ಸೇವಿಸುವಂತೆ ಪ್ರಚೋದಿಸುತ್ತಿದೆ.#JUNK FOOD

JUNK FOOD  ಅನ್ನು ಪೌಷ್ಟಿಕಾಂಶವಿಲ್ಲದ ಕಳಪೆ ಆಹಾರ ಪದಾರ್ಥಗಳೆಂದು ವ್ಯಾಖ್ಯಾನಿಸಬಹುದು. ಅವುಗಳು ಸಾಮಾನ್ಯವಾಗಿ ಕೊಬ್ಬು, ಸಕ್ಕರೆ, ಮತ್ತು ಅತಿಯಾದ ಉಪ್ಪನ್ನು ಹೊಂದಿರುತ್ತವೆ. ಆರೋಗ್ಯಕ್ಕೆ ಒಳ್ಳೆಯದಾದ  ಪ್ರೋಟೀನ್, ಫೈಬರ್, ವಿಟಮಿನ್ ಗಳು ಅಥವಾ ಖನಿಜಗಳಂತಹ ಅಗತ್ಯ ಅಂಶಗಳನ್ನು ಜಂಕ್‌ ಫುಡ್ ಹೊಂದಿರುವುದಿಲ್ಲ. 

ಅಧ್ಯಯನಗಳು ಹೇಳುವಂತೆ,

  • ಇಂತಹ ಆಹಾರಗಳ ಅತಿಯಾದ ಸೇವನೆಯು ಸ್ಥೂಲಕಾಯತೆ, ಮಧುಮೇಹ, ಹೃದ್ರೋಗಗಳು ಮತ್ತು ಕ್ಯಾನ್ಸರ್‌ನಂತಹ ವ್ಯಾಪಕವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಧಿಕ ತೂಕ ಮತ್ತು ಸ್ಥೂಲಕಾಯತೆಯು  ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಕ್ರಾಮಿಕ ರೋಗಗಳಾಗಿವೆ ಎಂದು ಹೇಳಿದೆ. ಇಂತಹ ಸಾಂಕ್ರಾಮಿಕ ರೋಗವು ಯುವ ಪೀಳಿಗೆಗೆ ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ (WHO, 2012).
  • ಫಾಸ್ಟ್‌ ಫುಡ್‌  ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ತೂಕ ಹೆಚ್ಚಾಗಲು ಕಾರಣವಾಗುತ್ತವೆ. ಸ್ಥೂಲಕಾಯತೆಯನ್ನು ಹೆಚ್ಚಿಸುತ್ತವೆ. ಸ್ಥೂಲಕಾಯತೆಯು ಒಂದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದ್ದು ಅದು ಹೃದ್ರೋಗ , ಪಾರ್ಶ್ವವಾಯು, ಕ್ಯಾನ್ಸರ್ ಮತ್ತು ಮಧುಮೇಹ ದಂತಹ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
  • ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ (JAMA) ನಲ್ಲಿ ಪ್ರಕಟವಾದ ಅಧ್ಯಯನವು ಬೊಜ್ಜು ಹೊಂದಿರುವ ಜನರಲ್ಲಿ ಹೃದಯಾಘಾತ, ಪಾರ್ಶ್ವವಾಯು ಮತ್ತು ಸಾವಿನ ಅಪಾಯವು ಹೆಚ್ಚಿರುತ್ತದೆ ಎಂದು ತೋರಿಸಿದೆ. ಡಯಾಬಿಟಿಸ್ ಕೇರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಸೇವಿಸುವ ಜನರು ಮಧುಮೇಹದ ಅಪಾಯವನ್ನು ಹೊಂದಿರುತ್ತಾರೆ ಎಂದು ತೋರಿಸಿದೆ.
  • ಫಾಸ್ಟ್ ಫುಡ್‌ಗಳಲ್ಲಿ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಸ್ಯಾಚುರೇಟೆಡ್ ಕೊಬ್ಬುಗಳು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಅದರಲ್ಲಿಯೂ ಹೈಡ್ರೋಜನೀಕರಿಸಿದ ಎಣ್ಣೆಗಳಿಂದ ತಯಾರಿಸಿದ ಜಂಕ್ ಆಹಾರ ಪದಾರ್ಥಗಳು ಅಪಾಯಕಾರಿ ಟ್ರಾನ್ಸ್ ಕೊಬ್ಬುಗಳನ್ನು ಹೊಂದಿರುತ್ತವೆ.

ಜಂಕ್‌ ಫುಡ್ ಗಳ ಸೇವನೆಯಿಂದ ನಮ್ಮ ದೇಹದ ಮೇಲಾಗುವ ಇನ್ನಿತರ ಪರಿಣಾಮಗಳು:-

1. ಮೆದುಳು ಮತ್ತು ಮಾನಸಿಕ ಆರೋಗ್ಯದ ಮೇಲೆ :-

ನಿತ್ಯ ಜಂಕ್‌ ತಿನ್ನುವುದರಿಂದ  ಇದರಲ್ಲಿರುವ ಸೋಡಿಯಂ ಅಂಶವು ತಲೆನೋವಿಗೆ ಕಾರಣವಾಗುತ್ತದೆ, ಇದು ದೈನಂದಿನ ಕಾರ್ಯಗಳ ಕಡೆಗೆ ನಮ್ಮ ಗಮನ ಮತ್ತು ಆಸಕ್ತಿಯನ್ನು ಕಳೆದುಕೊಳ್ಳಲು ಅನುವು ಮಾಡುತ್ತದೆ. ಸಂಸ್ಕರಿತ ಆಹಾರಗಳ ಸೇವನೆಯಿಂದ ಖಿನ್ನತೆ ಮತ್ತು ಇತರ ಮಾನಸಿಕ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.

2. ಹೃದಯರಕ್ತನಾಳದ ವ್ಯವಸ್ಥೆಯಲ್ಲಿ: –

ಅತಿ ಹೆಚ್ಚಿನ ಜಂಕ್‌ ಫುಡ್ ಸೇವನೆಯಿಂದಾಗಿ ಕೊಬ್ಬಿನ ಶೇಖರಣೆಯು ಹೆಚ್ಚಾಗುವ ಕಾರಣ ಹೃದಯಕ್ಕೆ ಹರಿಯುವ ಮತ್ತು ಹೃದಯದಿಂದ ಹರಿಯುವ ರಕ್ತವನ್ನು ನಿರ್ಬಂಧಿಸುತ್ತದೆ ಮತ್ತು ಹೃದಯಾಘಾತ ಇತ್ಯಾದಿಗಳಂತಹ ಅಕಾಲಿಕ ಹೃದಯ ಕಾಯಿಲೆಗಳ ಅಪಾಯವೂ ಇದೆ. ದುರ್ಬಲ ಹೃದಯವು ಇತರ ಅಂಗಗಳಿಗೆ  ಅಸಮರ್ಪಕವಾಗಿ ರಕ್ತವನ್ನು ಪೂರೈಸುವುದರಿಂದ ಇತರ ಅನೇಕ ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಕಾರಣವಾಗುತ್ತದೆ.

3. ಜೀರ್ಣಾಂಗ ವ್ಯೂಹದ ಮೇಲೆ:-

ಮೈದಾ ಹಿಟ್ಟಿನಿಂದ ತಯಾರಿಸಿದ ಸಂಸ್ಕರಿಸಿದ ಆಹಾರಗಳು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೀರ್ಣಕ್ರಿಯೆಯು ನಿಧಾನವಾದಾಗ ಚಯಾಪಚಯವು ನಿಧಾನವಾಗುತ್ತದೆ ಮತ್ತು ಇದು ತೂಕ ಹೆಚ್ಚಳ ಮತ್ತು ಸ್ಥೂಲಕಾಯತೆಗೆ ಕಾರಣವಾಗುತ್ತದೆ. ಜಂಕ್‌ ಫುಡ್‌ ಸೇವನೆಯಿಂದ  ಆಸಿಡ್ ರಿಫ್ಲಕ್ಸ್, ಮಲಬದ್ಧತೆ ಮತ್ತು ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು.

4. ಚರ್ಮದ ಮೇಲೆ :-

ಸಂಸ್ಕರಿಸಿದ ಮತ್ತು ಎಣ್ಣೆಯುಕ್ತ ಆಹಾರದಲ್ಲಿ ಅನಾರೋಗ್ಯಕರ ಕೊಬ್ಬಿನ ಪ್ರಮಾಣ  ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಚರ್ಮ ಮತ್ತು ಮುಖದಲ್ಲಿ ಮೊಡವೆಗಳು ಉಂಟಾಗಲು ಕಾರಣವಾಗುತ್ತದೆ. ಅಲ್ಲದೆ  ಬೇಗ ವಯಸ್ಸಾದಂತೆ ಕಾಣುವುದನ್ನು  ಹೆಚ್ಚಿಸಿ ಅಕಾಲಿಕ ಚರ್ಮದ ಸುಕ್ಕುಗಳು ಮತ್ತು ಸೂಕ್ಷ್ಮಗೆರೆಗಳನ್ನು ಹೆಚ್ಚಿಸುತ್ತದೆ.

 

best web company in tumkur

Ayushmanbhava Karnataka

error: Content is protected !!