ಜಂಕ್ ಫುಡ್ ತಿನ್ನುವುದು ಕಡಿಮೆ ಮಾಡಲು ಸಿಂಪಲ್ ಟಿಪ್ಸ್# TIPS TO STOP EATING JUNK FOOD
ಜಂಕ್ ಫುಡ್ ತಿನ್ನುವುದು ಕಡಿಮೆ ಮಾಡಲು ಸಿಂಪಲ್ ಟಿಪ್ಸ್# TIPS TO STOP EATING JUNK FOOD
ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಕೊಬ್ಬು, ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್ ಗಳಂತಹ ಪೌಷ್ಟಿಕಾಂಶಗಳಿಂದ ಪೂರಕವಾಗಿರುತ್ತದೆ. ಸೊಪ್ಪು ಮತ್ತು ತರಕಾರಿಗಳು, ಹಣ್ಣುಗಳು, ಕಾಳುಗಳು ಮತ್ತು ಧಾನ್ಯಗಳು ಮುಂತಾದ ಆಹಾರಗಳಲ್ಲಿ ಈ ಎಲ್ಲಾ ಪೌಷ್ಟಿಕಾಂಶಗಳನ್ನು ನಾವು ಕಾಣಬಹುದು.
ನಾವು ನಮ್ಮ ದೇಹಕ್ಕೆ ಸೊಪ್ಪು ಮತ್ತು ತರಕಾರಿಗಳು, ಹಣ್ಣುಗಳು, ಕಾಳುಗಳು ಮತ್ತು ಧಾನ್ಯಗಳು ಮುಂತಾದ ಸರಿಯಾದ ಪೌಷ್ಟಿಕಾಂಶ ಒಳಗೊಂಡ ಆಹಾರ ನೀಡಿದಾಗ ಅದು ನಮಗೆ ಅಗತ್ಯವಿರುವ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ. ಆದ್ದರಿಂದ junk food ಗಳ ಬಯಕೆ ಅಥವಾ craving ಅನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಇಂದಿನಿಂದಲೇ ಈ ಕೆಲವು ನಿಯಮಗಳನ್ನು ಪಾಲಿಸಲು ಪ್ರಾರಂಭಿಸಿ.
ಸೊಪ್ಪು ಮತ್ತು ತರಕಾರಿಗಳ ಮಹತ್ವ ತಿಳಿಯಿರಿ ಮತ್ತು ತಿಳಿಸಿಕೊಡಿ:-
ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಹಸಿರು ತರಕಾರಿಗಳ ಮಹತ್ವ ಮತ್ತು ಅದನ್ನು ತಿನ್ನಲು ಪ್ರೋತ್ಸಾಹಿಸುವ ಮೂಲಕ ಮಕ್ಕಳು ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಬಹುದು. ಆರೋಗ್ಯಕರವಾಗಿ ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ಆಕರ್ಷಕವಾಗಿ ಕಾಣುವಂತೆ ಅಲಂಕರಿಸಿ ಮಕ್ಕಳಿಗೆ ಕೊಡುವುದರಿಂದ ಅವರು ಇಷ್ಟಪಟ್ಟು ತಿನ್ನುತ್ತಾರೆ.
ಅಲ್ಲದೆ, ನಿಮಗೆ ಕಷ್ಟವೆನಿಸಿದರೂ ಹೊಸ ತರಹದ ತಿಂಡಿಗಳನ್ನು ಮನೆಯಲ್ಲೇ ತಯಾರಿಸಲು ಪ್ರಯತ್ನಿಸಿ. ಇದರಿಂದ ಹೊರಗಿನ ತಿಂಡಿಗಳ ಬಗ್ಗೆ ನಮ್ಮ ಆಸಕ್ತಿ ಕಡಿಮೆಯಾಗುತ್ತದೆ. ಅದೇ ರೀತಿ ಪ್ರತಿದಿನ ಒಂದೇ ತರಹದ ಆಹಾರವನ್ನು ತಯಾರಿಸುವ ಬದಲು ತರಕಾರಿಯನ್ನು ಉಪಯೋಗಿಸಿಕೊಂಡು ಹೊಸ ಬಗೆಯ ಪಾಕವಿಧಾನಗಳನ್ನು ಅನುಸರಿಸಿ ನಿಮ್ಮ ಊಟದಲ್ಲಿ ವಿವಿಧ ರೀತಿಯ ಆರೋಗ್ಯಕರ ಆಹಾರವನ್ನು ಸೇರಿಸಿ.
ಯೋಜನೆ ರೂಪಿಸಿಕೊಳ್ಳಿ# Plan Junk food outing:-
ಸಂಪೂರ್ಣವಾಗಿ ಒಂದೇ ಸಲಕ್ಕೆ ಜಂಕ್ ಫುಡ್ ಗಳ ಸೇವನೆಯನ್ನು ತಪ್ಪಿಸುವಂತೆ ಮಕ್ಕಳಿಗೆ ನಿಯಮವನ್ನು ಹಾಕುವುದರಿಂದ ಮಕ್ಕಳು ಜಂಕ್ ಫುಡ್ ಗಳನ್ನು ತಿನ್ನುವ ಅಭ್ಯಾಸವನ್ನು ಒಮ್ಮೆಲೆ ಬಿಡಲಾರದೆ ನಿಮಗೆ ಗೊತ್ತಿಲ್ಲದೆ ತಿನ್ನುವ ಇನ್ನೊಂದು ಮಾರ್ಗವನ್ನು ಹುಡುಕುತ್ತಾರೆ. ಆದ್ದರಿಂದ ಮಕ್ಕಳನ್ನು ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಹೊರಗೆ ಕರೆದುಕೊಂಡು ಹೋಗುವ ಯೋಜನೆಯನ್ನು ಮಾಡಿಕೊಳ್ಳಿ ಹಾಗೂ ಅವರಿಗೆ ಜಂಕ್ ಫುಡ್ ಅನ್ನು ಸೀಮಿತ ಪ್ರಮಾಣದಲ್ಲಿ ಕೊಡಲು ನಿರ್ಧರಿಸುವುದರಿಂದ ದಿನ ಕ್ರಮೇಣ ಮಕ್ಕಳಿಗೆ ಜಂಕ್ ಫುಡ್ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆ.
ಮೈಂಡ್‌ಫುಲ್ ಈಟಿಂಗ್:-
ಮೈಂಡ್‌ಫುಲ್ ಈಟಿಂಗ್ ಅಥವಾ ತಿನ್ನುವ ಆಹಾರದ ಕಡೆ ಗಮನ ಕೊಡುವುದು ಎಂದರೆ ಆಹಾರ ಮತ್ತು ಆಹಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅರಿವನ್ನು ಹೊಂದುವುದು ಮತ್ತು ತಿನ್ನುವ ಸಮಯದಲ್ಲಿ ಬೇರೆಡೆ ಗಮನ ಕೊಡದೆ ( Tv, Phone) ಆಹಾರದ ತಾಪಮಾನ, ಬಣ್ಣ, ರುಚಿ ಗಳನ್ನು ಸವಿಯುವುದು. ಇದರಿಂದ ನಿಮ್ಮ ಆಹಾರ ಪದ್ಧತಿ, ಹಸಿವು, ಫುಡ್ ಕ್ರೇವಿಂಗ್ ಗಳನ್ನು ಅರ್ಥ ಮಾಡಿಕೊಳ್ಳಬಹುದು. ಆಲೋಚನೆ ಇಲ್ಲದೆ ಬೇರೆ ಯಾವುದೋ ಕಡೆ ಗಮನವಿಟ್ಟು ಆಹಾರಗಳನ್ನು ತಿನ್ನುವುದನ್ನು ತಪ್ಪಿಸಲು ಮೈಂಡ್‌ಫುಲ್ ಈಟಿಂಗ್ ಸಹಾಯ ಮಾಡುತ್ತದೆ. ಈ ಅಭ್ಯಾಸದಿಂದ ನಿಜವಾದ ದೈಹಿಕ ಹಸಿವನ್ನು ಗುರುತಿಸಿಕೊಳ್ಳಲು ಮತ್ತು ನಿಮಗೆ ಎಷ್ಟು ಅವಶ್ಯಕವೂ ಅಷ್ಟು ಆಹಾರ ತಿನ್ನುವ ಅಭ್ಯಾಸ ರೂಢಿಯಾಗುತ್ತದೆ.
ಶಾಪಿಂಗ್ ಮಾಲ್ ಅಥವಾ ಸೂಪರ್ ಮಾರ್ಕೆಟ್‌ಗಳಿಗೆ ಹೋಗಲು ಸಮಯ ನಿಗದಿಸಿ:-
ಹಸಿದಿರುವಾಗ ನಿಮಗೆ ತಿನ್ನುವ ಬಯಕೆಗಳು ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಶಾಪಿಂಗ್ ಮಾಲ್ ಗಳಿಗೆ ಹೋದರೆ ನಿಮ್ಮ ಮೊದಲ ಗಮನ ಅಲ್ಲಿನ ಜಂಕ್ ಫುಡ್ ಗಳ ಮೇಲೆಯೇ ಹೋಗುವುದು ಇದರಲ್ಲಿ ಸಂದಹವೇ ಇಲ್ಲ. ನೀವು ಇಷ್ಟಪಡುವ ಎಲ್ಲಾ ತರಹದ ಜಂಕ್ ಫುಡ್‌ಗಳು ಸೂಪರ್ ಮಾರ್ಕೆಟ್ ಗಳಲ್ಲಿ ಲಭ್ಯವಿರುವುದರಿಂದ ನಿಮ್ಮ ಮೊದಲ ಆಯ್ಕೆ ಅದೇ ಆಗಿರುತ್ತದೆ. ಆದ್ದರಿಂದ ನೀವು ಸರಿಯಾದ ಸಮಯದ ಯೋಜನೆಯನ್ನು ರೂಪಿಸಿಕೊಂಡು ಊಟದ ನಂತರ ಶಾಪಿಂಗ್ ಅನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮ್ಮ ಜಂಕ್ ಫುಡ್ ಸೇವನೆಯ ಬಯಕೆ ಕಡಿಮೆ ಮಾಡಿಕೊಳ್ಳಬಹುದು.
ಜಂಕ್ ಫುಡ್ ತಿನ್ನಲು ಬಿಡುವ ಅವಧಿಯಲ್ಲಿ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳಿ:-
ಆರೊಗ್ಯಕರ ಲಘು ಆಹಾರಗಳು ಅಂದರೆ ಹಣ್ಣುಗಳು, ವಿವಿಧ ಬೀಜಗಳು, ಡ್ರೈ ಫ್ರೂಟ್ ಗಳು ಮತ್ತು ತರಕಾರಿಗಳ ಸೇವನೆಯಿಂದ ನಿಮ್ಮ ದೇಹವು ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುತ್ತದೆ ಮತ್ತು ನಿಮಗೆ ಹೆಚ್ಚು ಹಸಿವಾಗುವುದನ್ನು ತಪ್ಪಿಸುತ್ತದೆ ಇದರಿಂದ ನಿಮಗೆ ಬೇಕರಿ ತಿನಿಸುಗಳನ್ನು ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ.
ಹೆಚ್ಚು ಪ್ರೋಟೀನ್ ಸೇವಿಸಿ:-
ಹೆಚ್ಚು ಪ್ರೋಟೀನ್ ಹೊಂದಿರುವ ಆಹಾರಗಳನ್ನು ಸೇವಿಸುವುದು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಜಂಕ್ ಫುಡ್ ಗಳ ಸೇವನೆಯ ಬಯಕೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚು ಕಾಲದ ವರೆಗೆ ನಿಮ್ಮ ಹಸಿವನ್ನು ತಡೆಯುತ್ತದೆ.
ಅಧಿಕ ತೂಕವಿರುವ ಹದಿಹರೆಯದ ಮಕ್ಕಳ ಮೇಲೆ ನೆಡಸಿದ ಒಂದು ಅಧ್ಯಯನವು ಹೆಚ್ಚಿನ ಪ್ರೋಟೀನ್ ಯುಕ್ತ ಉಪಹಾರವನ್ನು ತಿನ್ನುವುದು ಕಡುಬಯಕೆಗಳನ್ನು (CRAVINGS) ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಅಧಿಕ ತೂಕವಿರುವ ಪುರುಷರಲ್ಲಿನ ಮತ್ತೊಂದು ಅಧ್ಯಯನವು ಪ್ರೋಟೀನ್ ಸೇವನೆಯನ್ನು ಶೇ. 25% ಕ್ಯಾಲೊರಿಗಳಿಗೆ ಹೆಚ್ಚಿಸುವುದರಿಂದ ಕಡುಬಯಕೆಗಳನ್ನು ಶೇ. 60% ರಷ್ಟು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಹೆಚ್ಚುವರಿಯಾಗಿ, ಸಂಜೆಯಲ್ಲಿ ತಿನ್ನುವ ಸ್ನ್ಯಾಕ್ಸ್ ತಿಂಡಿಗಳ ಬಯಕೆಯು 50% ರಷ್ಟು ಕಡಿಮೆಯಾಗುತ್ತದೆ ಎಂದು ತಿಳಿಸಿದೆ.