ಪೂಜೆಯಿಂದ ಆಗುವ ಪ್ರಯೋಜನಗಳು# Benefits of Praying

ಪೂಜೆಯಿಂದ ಆಗುವ ಪ್ರಯೋಜನಗಳು# Benefits  of Praying

 

ಪೂಜೆಯಿಂದ ಆಗುವ ಪ್ರಯೋಜನಗಳು# Benefits of Praying

ಪೂಜೆಯನ್ನು ಮಾಡುವುದರಿಂದ ಒಳ್ಳೆಯ ಆಲೋಚನೆಗಳು ಮತ್ತು ಆಧ್ಯಾತ್ಮಿಕ ಕಂಪನಗಳು (Spiritual vibes) ಹೆಚ್ಚಾಗುತ್ತವೆ. ದೈವಿಕ ಶಕ್ತಿಗಳು (Cosmic Universe) ನಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕುತ್ತವೆ ಮತ್ತು ನಮ್ಮ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರುವಂತಹ ಧನಾತ್ಮಕ ಶಕ್ತಿಯನ್ನು ನೀಡುತ್ತವೆ.

ಪೂಜೆಯು ಇಡೀ ಸೃಷ್ಟಿಯನ್ನು ಗೌರವಿಸುವ ವಿಸ್ತೃತ ಪ್ರಜ್ಞೆಯ ಅಭಿವ್ಯಕ್ತಿಯಾಗಿದೆ. ಪೂಜೆಯ  ಮೂಲಕ ಮನಸ್ಸಿನ ಶಾಂತಿಯನ್ನು ಸಾಧಿಸುವುದು ನಿಮ್ಮ ಜೀವನದಲ್ಲಿ ಸಾಮರಸ್ಯವನ್ನು ತರಲು ನೀವು ಆರಿಸಿಕೊಳ್ಳಬಹುದಾದ ಅತ್ಯುತ್ತಮ ಮಾರ್ಗವಾಗಿದೆ. ಪೂಜೆ ಮಾಡಲು ನಾವು ಬೆಳಗಿನ ಸಮಯವನ್ನು ಮೀಸಲಿಡುವು ಒಳ್ಳೆಯದು ಏಕೆಂದರೆ ವೇದಗಳು ಹೇಳುವ ಪ್ರಕಾರ, ದೇಹವು ಬೆಳಗಿನ ಸಮಯದಲ್ಲಿ ಪ್ರಾರ್ಥನೆಗಳಿಗೆ ಹೆಚ್ಚು ಸ್ವೀಕಾರಾರ್ಹವಾಗಿರುತ್ತದೆ ಮತ್ತು ಧ್ಯಾನಸ್ಥ ಸ್ಥಿತಿಯಲ್ಲಿರಲು ನಮ್ಮನ್ನು ಪ್ರೇರೇಪಿಸುತ್ತದೆ. ಹೀಗೆ ಉತ್ತಮ ರೀತಿಯಲ್ಲಿ ಪ್ರಾರಂಬಿಸಿದ ದಿನವೂ ಆಹ್ಲಾದಕರವಾಗಿಯೂ ಉಲ್ಲಾಸಮಯವಾಗಿಯೂ ಇರುತ್ತದೆ. 

ಪೂಜೆಯನ್ನು ದಿನನಿತ್ಯದ ಅಭ್ಯಾಸವಾಗಿ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ:-

1. ದಿನವನ್ನು ಧನಾತ್ಮಕವಾಗಿ ಪ್ರಾರಂಭಿಸುತ್ತದೆ

ದೇವರ ಪೂಜೆಯೊಂದಿಗೆ ದಿನವನ್ನು ಪ್ರಾರಂಭಿಸಿದಾಗ, ನಾವು ನಮ್ಮ ದಿನವನ್ನು ಸಕಾರಾತ್ಮಕತೆ ಮತ್ತು ಶಾಂತಿಯಿಂದ ಪ್ರಾರಂಭಿಸಬಹುದು. ದೈವ ಶಕ್ತಿಯ ಬಲವು ಪ್ರತಿದಿನದ ನಮ್ಮ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ನಮ್ಮಲ್ಲಿ ಶಕ್ತಿಯನ್ನು ತುಂಬುತ್ತದೆ.

2. ಕುಟುಂಬ ಸಾಮರಸ್ಯವನ್ನು ಹೆಚ್ಚಿಸುತ್ತದೆ

ಕುಟುಂಬ ಸಮೇತರಾಗಿ ಪೂಜೆಯನ್ನು ಮಾಡುವುದರಿಂದ ಇಡೀ ಕುಟುಂಬ ಒಟ್ಟಿಗೆ ಸಮಯ ಕಳೆಯುವ ಆಚರಣೆಯು ರೂಢಿಯಾಗುತ್ತದೆ. ಅಲ್ಲದೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಹೋಗುವುದನ್ನು ಕಲಿಸಿಕೊಟ್ಟ ತೃಪ್ತಿ ನಮ್ಮಲ್ಲಿ ಮೂಡುತ್ತದೆ. ಮಕ್ಕಳು ದೇವರಲ್ಲಿ ಧೃಢವಾದ ನಂಬಿಕೆಯನ್ನು ಬೆಳೆಸಿಕೊಂಡರೆ ಅವರು ತಪ್ಪು ದಾರಿ ತುಳಿಯುವುದಿಲ್ಲ ಮತ್ತು ಅವರ ಗುರಿಯನ್ನು ಮಟ್ಟುವುದರಲ್ಲಿ ಯಶಸ್ವಿಯಾಗುತ್ತಾರೆ.

3. ಸಕಾರಾತ್ಮಕ ಕಂಪನಗಳನ್ನು ಹೆಚ್ಚಿಸುತ್ತದೆ

ಪೂಜೆಯನ್ನು ಮಾಡುವುದರಿಂದ ಮನಸ್ಸು ಶುದ್ಧವಾಗುವುದಲ್ಲದೆ ಮನೆಯಲ್ಲಿ ಧನಾತ್ಮಕ ಕಂಪನಗಳನ್ನು  ಹೆಚ್ಚುತ್ತವೆ. ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ ಉತ್ತಮ ಕೆಲಸಗಳನ್ನು ಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ. ಪೂಜಾ ಸಮಯದಲ್ಲಿ ನಾವು  ಮಂತ್ರವನ್ನು ಪಠಿಸಿದಾಗ ಸಕಾರಾತ್ಮಕ ಕಂಪನಗಳು ಸೃಷ್ಟಿಯಾಗಿ ನಮ್ಮಲ್ಲಿ ಶಕ್ತಿ ತುಂಬುತ್ತವೆ.

4. ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ

ಯಾವುದೇ ಸಮಸ್ಯೆಗಳು ಅಥವಾ ಸವಾಲುಗಳು ಬಂದರೂ ಅವುಗಳನ್ನು ಸಮರ್ಪಕವಾಗಿ ನಿಭಾಯಿಸಲು ಮತ್ತು ಮನಸ್ಸಿನ ಸಮತೋಲನ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.

5. ನಮ್ಮಲ್ಲಿ ನಮಗೆ ನಂಬಿಕೆ ಹೆಚ್ಚುವಂತೆ ಮಾಡುತ್ತದೆ

ಜೀವನದಲ್ಲಿ ನಾವು ಏನಾದರು ಸಾಧಿಸಬೇಕಾದರೆ ಸಾಧಿಸುವ ಛಲವಿದ್ದರೆ ಜೀವನದಲ್ಲಿ ನಮಗೆ ಯಶಸ್ಸು ಸಿಗುವುದು ಖಂಡಿತ. ನಾವು ಮಾಡುವ ಪೂಜೆ ಪುನಸ್ಕಾರಗಳು ನಮ್ಮ ನಂಬಿಕೆಗಳನ್ನು ಬಲಪಡಿಸುತ್ತದೆ. ಸಾಧಿಸುವ ಛಲವನ್ನು ಬಲಪಡಿಸುತ್ತದೆ.

6. ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ

ಸರ್ವತೋಮುಖ ಬೆಳವಣಿಗೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ ಮಕ್ಕಳಿಗೆ ಪೂಜೆಯ ಮಹತ್ವದ ಬಗ್ಗೆ ತಿಳಿಸಿಕೊಡಬೇಕು ಮತ್ತು ದೇವರ ಅನುಗ್ರಹಕ್ಕಾಗಿ ಪ್ರತಿದಿನ ಪೂಜೆ ಮಾಡುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ದೈನಂದಿನ ಪೂಜೆಯು ಇಡೀ ದಿನ ಮಕ್ಕಳನ್ನು ಸಕಾರಾತ್ಮಕ ವಾಗಿರುವಂತೆ ಮಾಡುವುದಲ್ಲದೆ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಮಗುವಿನ ಒತ್ತಡವನ್ನು ನಿವಾರಿಸಿ ಯಾವುದೇ ವಿಷಯದ ಬಗ್ಗೆ ಸ್ಪಷ್ಟವಾಗಿ ಆಲೋಚಿಸಲು ಸಹಾಯ ಮಾಡುತ್ತದೆ. ನಮ್ಮ ಶಾಸ್ತ್ರಗಳು ತಿಳಿಸುವ ನೀತಿಪಾಠಗಳು   ಒಳಿತು ಕೆಡುಕುಗಳ ಮಧ್ಯೆ ಇರುವ ವ್ಯತ್ಯಾಸದ ಅರಿವು ಮೂಡಿಸುತ್ತವೆ.  

 

best web company in tumkur

Ayushmanbhava Karnataka

error: Content is protected !!