ಸಾಫ್ಟ್ ಡ್ರಿಂಕ್ ಸೇವನೆ ಬೇಡವೇ ಬೇಡ# SAY NO TO SOFT DRINKS

ಸಾಫ್ಟ್ ಡ್ರಿಂಕ್ ಸೇವನೆ ಬೇಡವೇ ಬೇಡ# SAY NO TO SOFT DRINKS

ಸಾಫ್ಟ್‌ ಡ್ರಿಂಕ್‌ ಸೇವನೆ ಬೇಡವೇ ಬೇಡ

  • ಬೇಸಿಗೆಗಾಲ ಶುರುವಾದ್ರೆ ಸಾಕು ಜನ ಹೆಚ್ಚು ಮೊರೆ ಹೋಗೋದೇ ತಂಪು ಪಾನೀಯಗಳಿಗೆ. ಆದರೆ ಇಂತಹ ಪಾನೀಯಗಳು ನಿಸರ್ಗದತ್ತವಾಗಿದ್ದರೆ ತೊಂದರೆ ಇಲ್ಲ ಅದರೆ ಕೃತಕ ಪಾನೀಯವಾಗಿದ್ದರೆ ಅವು ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತವೆ.
  • ಇಂದು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಸಾಫ್ಟ್‌ ಡ್ರಿಂಕ್ ಗಳನ್ನು ಕಾಣುತ್ತೇವೆ. ಇಂತಹ ಡ್ರಿಂಕ್ ಗಳು ಇಂದಿನ ಯುವ ಪೀಳಿಗೆಯನ್ನು ಹೆಚ್ಚು ಆಕರ್ಷಿಸಿವೆ. ಸಾಫ್ಟ್‌ ಡ್ರಿಂಕ್ ಗಳು ಕೆಲವರ ಜೀವನದ ಒಂದು ಭಾಗವಾಗಿ ಹೋಗಿವೆ . ಇತ್ತೀಚಿನ ದಿನಗಳಲ್ಲಿ ಎಲ್ಲಾ ರುಚಿ ಮತ್ತು ಪರಿಮಳದಲ್ಲೂ ಸಿಗುವುದರಿಂದ ಹಾಗೂ ಇವು ಅಡಿಕ್ಟಿವ್‌ ಆಗಿರುವುದರಿಂದ  ಜನರು ಅದರ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ ಮತ್ತು ಅವಲಂಬಿತರಾಗುತ್ತಿದ್ದಾರೆ.

ಹಾನಿಕಾರಕ ಸಾಫ್ಟ್‌  ಪಾನೀಯಗಳ ಸೇವನೆಯಿಂದ ನಮ್ಮ  ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು:- 

  •  ತಂಪು ಪಾನೀಯಗಳು ನಮ್ಮ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತವೆ ಎಂದು ನಿಮಗೆ ಗೊತ್ತೇ! ಇವು ಬೊಜ್ಜು, ಮಧುಮೇಹ, ಹೃದ್ರೋಗ, ಹೊಟ್ಟೆಯ ಸಮಸ್ಯೆಗಳು, ಕ್ಯಾನ್ಸರ್, ಪಿತ್ತಜನಕಾಂಗದ ಹಾನಿ, ಬಂಜೆತನ, ಮೂಳೆಗಳ ಸವೆತದಂತಹ ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತವೆ.
  • ಅನೇಕ ತಂಪು ಪಾನೀಯಗಳು ಗಮನಾರ್ಹ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಕೋಲಾದ ಒಂದು 12-ಔನ್ಸ್ (29.6‌ ml) ಉದಾಹರಣೆಗೆ, 39 ಗ್ರಾಂ, ಅಥವಾ 3.3 ಟೀ ಟೇಬಲ್‌ ಸ್ಪೂನ್, ಸಕ್ಕರೆಯನ್ನು ಒಳಗೊಂಡಿರುತ್ತದೆ.  ಇಷ್ಟೊಂದು ಸಕ್ಕರೆಯನ್ನು ಸೇವಿಸುವುದರಿಂದ  ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಹೆಚ್ಚುತ್ತದೆ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು.
  • ಅನೇಕ ಸೋಡಾಗಳು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಅಥವಾ HFCS ಅನ್ನು ಅವುಗಳ ಪ್ರಾಥಮಿಕ ಸಕ್ಕರೆ ಅಂಶವಾಗಿ ಹೊಂದಿರುತ್ತವೆ. HFCS ಮೇದೋಜೀರಕ ಗ್ರಂಥಿಗೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತಕ್ಕೆ ಕಾರಣವಾಗುತ್ತದೆ.  ಸೋಡಾಗಳನ್ನು ದಿನನಿತ್ಯ ಸೇವಿಸುವುದರಿಂದ ಇನ್ಸುಲಿನ್ ಅವಲಂಬಿತ ಮಧುಮೇಹ ಅಥವಾ ಟೈಪ್ 2 ಮಧುಮೇಹದಕ್ಕೆ ಕಾರಣವಾಗಬಹುದು. ಸೋಡಾದಲ್ಲಿನ ಸಕ್ಕರೆಯು ನಿಮ್ಮ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಸಹ ಪೋಷಿಸುತ್ತದೆ. ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ಒಡೆಯುವುದರಿಂದ, ಅವು ಆಮ್ಲೀಯ ಉಪಉತ್ಪನ್ನವನ್ನು ಬಿಡುಗಡೆ ಮಾಡುತ್ತವೆ, ಅದು ನಿಮ್ಮ ಹಲ್ಲುಗಳ ಮೇಲಿನ ದಂತಕವಚವನ್ನು ಹಾಳುಮಾಡುತ್ತದೆ.
  • ತಂಪು ಪಾನೀಯವು ಮುಖ್ಯವಾಗಿ ಇಂದಿನ ಮಕ್ಕಳು ಮತ್ತು ಯುವಕರ ಆರೋಗ್ಯದ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಬೀರಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ವೈದ್ಯಕೀಯ ಸಂಶೋಧನೆಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಒಬೇಸಿಟಿ ಅಥವಾ ಅಧಿಕ ತೂಕ, ಸಕ್ಕರೆ ಕಾಯಿಲೆ, ಕಿಡ್ನಿ ವೈಫಲ್ಯ ದಂತಹ ಅನೇಕ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ.
  • ಇತ್ತೀಚಿನ ಅಧ್ಯಯನವು ಈ ತಂಪು ಪಾನೀಯಗಳು ಮೆದುಳಿನ ಕಾರ್ಯಕ್ಷಮತೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂದು ತೋರಿಸಿದೆ.
  • ಸೋಡಾ ಪಾನೀಯಗಳು ಮತ್ತು ಜಂಕ್ ಫುಡ್‌ಗಳಿಂದಾಗಿ ಮಹಿಳೆಯರಲ್ಲಿ ಬಂಜೆತನಕ್ಕೆ ಹೆಚ್ಚಾಗುತ್ತಿದೆ .ಇದು ಮಹಿಳೆಯರ ಋತುಚಕ್ರದ ವ್ಯವಸ್ಥೆ, ಸಂತಾನೋತ್ಪತ್ತಿ ವ್ಯವಸ್ಥೆ, ರಕ್ತಪರಿಚಲನಾ ವ್ಯವಸ್ಥೆ ಮೇಲೆ ಸಹ ಪರಿಣಾಮ ಬೀರುತ್ತಿದೆ.
  • ಪ್ರತಿಯೊಂದೂ ತಂಪು ಪಾನೀಯವು ಕೆಲವು ರೀತಿಯ ಆಮ್ಲವನ್ನು (acid) ಒಳಗೊಂಡಿರುವುದರಿಂದ ನಮ್ಮ ಹೊಟ್ಟೆ ಮತ್ತು ಹಲ್ಲುಗಳಿಗೆ ಹಾನಿಕಾರಕವಾಗಿದೆ.

ತಂಪು ಪಾನೀಯಗಳು ಒಬ್ಬ ವ್ಯಕ್ತಿಗೆ ಅತ್ಯಂತ ಹಾನಿಕಾರಕ ಎಂಬುದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಸತ್ಯವಾಗಿದೆ.  ವಿಶೇಷವಾಗಿ, ಬೆಳೆಯುತ್ತಿರುವ  ಮಕ್ಕಳಿಗೆ ಇವು ಹಾನಿಕಾರಕವಾಗಿದ್ದು ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿವೆ. ಆದ್ದರಿಂದ ಶಾಲೆಗಳ ಸುತ್ತಮುತ್ತ ಕಾರ್ಬೊನೇಟೆಡ್ ಪಾನೀಯಗಳ ಮಾರಾಟವನ್ನು ನಿಷೇಧಿಸುವ ಕ್ರಮವನ್ನು ಸರ್ಕಾರಗಳು ಕೈಗೊಳ್ಳಬೇಕು. ಹಾಗೂ ಪೋಷಕರು ತಮ್ಮ ಮಕ್ಕಳಿಗೆ ತಂಪು ಪಾನೀಯಗಳ ಬದಲಿಗೆ ತಾಜಾ ಹಣ್ಣಿನ ರಸವನ್ನು ಕುಡಿಯುವುದು ಉತ್ತಮ ಎಂದು ಮನವರಿಕೆ ಮಾಡಬೇಕು.

 

best web company in tumkur

Ayushmanbhava Karnataka

error: Content is protected !!