ಸಿಹಿ ಆರೋಗ್ಯಕ್ಕೆ ಕಹಿ; ಸಕ್ಕರೆಯ ದುಷ್ಪರಿಣಾಮಗಳು # EFFECTS OF SUGAR ON HEALTH # SUGAR CHALLENGE
ಸಿಹಿ ಆರೋಗ್ಯಕ್ಕೆ ಕಹಿ; ಸಕ್ಕರೆಯ ದುಷ್ಪರಿಣಾಮಗಳು # EFFECTS OF SUGAR ON HEALTH # 21 DAYS SUGAR CHALLENGE
ಸೋಷಿಯಲ್ ಮೀಡಿಯಾದಲ್ಲಿ 15 Days Sugar challenge ಹೆಚ್ಚು ವೈರಲ್ ಆಗುತ್ತಿದೆ. ಏಕೆಂದರೆ ಜನರಲ್ಲಿ ಸಕ್ಕರೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಹೆಚ್ಚುತ್ತಿದೆ. ಇಂದಿನ ಯುವ ಪೀಳಿಗೆಯ ಮಕ್ಕಳು ಸೋಡಾ, ಕ್ಯಾಂಡಿ, ಸಿಹಿ ತಿಂಡಿಗಳು, ಬೇಕರಿ ಪದಾರ್ಥಗಳನ್ನು ಸೇವಿಸುವ ಮೂಲಕ ಹೆಚ್ಚು ಸಕ್ಕರೆಯನ್ನು ಸೇವಿಸುತ್ತಾರೆ. ಇದರಿಂದ ತಮ್ಮ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ಸ್ಥೂಲಕಾಯ ಮತ್ತು ಹೃದ್ರೋಗದಂತಹ ಕಾಯಲೆಗಳಿಂದ ಬಳಲುತ್ತಿದ್ದಾರೆ.
ಹೆಚ್ಚು ಸಕ್ಕರೆ ಸೇವಿಸುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅತಿಯಾದ ಸಕ್ಕರೆ ಸೇವನೆ ಯಕೃತ್ತಿನ ಕೊಬ್ಬು (fatty liver), ಟೈಪ್ 2 ಡಯಾಬಿಟಿಸ್, ಬೊಜ್ಜಿನ ಸಮಸ್ಯೆ, ಅಸಮತೋಲಿತ ಮನಸ್ಥಿತಿ, ನೆನಪಿನ ಶಕ್ತಿಯ ನಷ್ಟ , ಹೃದ್ರೋಗ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ.
21 ದಿನ ಸಕ್ಕರೆಯ ಸೇವನೆಯನ್ನು ಪೂರ್ಣ ಪ್ರಮಾಣದಲ್ಲಿ ಬಿಡುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಅತ್ಯುತ್ತಮವಾಗುತ್ತದೆ. ಚರ್ಮ ಮತ್ತು ಕೂದಲಿನ ಆರೋಗ್ಯ ಉತ್ತಮವಾಗುತ್ತದೆ, ಮಿದುಳು ಚುರುಕಾಗುತ್ತದೆ, ಆರೋಗ್ಯಕರ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಂತರದ ದಿನಗಳಲ್ಲಿ ಸಕ್ಕರೆಯ ಮೇಲಿನ ಅವಲಂಬನೆ ಮತ್ತು ಬಯಕೆ (Craving) ಕಡಿಮೆಯಾಗುತ್ತದೆ. ಆದರೆ ಇದು ಅಷ್ಟು ಸುಲಭವಲ್ಲ. ಆದರೆ ಒಮ್ಮೆ ಕಷ್ಟಪಟ್ಟು ಧೃಢಸಂಕಲ್ಪದಿಂದ ಸಕ್ಕರೆ ಸೇವನೆ ತ್ಯಜಿಸಿದರೆ ಆರೋಗ್ಯ ಅತ್ಯುತ್ತಮವಾಗುತ್ತದೆ.
ಸಕ್ಕರೆ ಸೇವನೆಯನ್ನು ಸಂಪೂರ್ಣವಾಗಿ ಬಿಡುವುದರಿಂದ ಆಗುವ ಹಲವು ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ರಕ್ತದಲ್ಲಿನ ಸಕ್ಕರೆ ನಿರ್ವಹಣೆಗೆ ಸಹಾಯ
ಸಕ್ಕರೆಯುಕ್ತ ಆಹಾರಗಳನ್ನು ತಿನ್ನುವುದು ಮತ್ತು ಅಧಿಕ ಸಕ್ಕರೆಯುಳ್ಳ ಪಾನೀಯಗಳನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆ ನಿರ್ವಹಣೆಗೆ ಹಾನಿ ಮಾಡುತ್ತದೆ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಆದ್ದರಿಂದ ಸಕ್ಕರೆಯನ್ನು ಕಡಿಮೆ ಮಾಡುವುದು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. 21 ದಿನಗಳವರೆಗೆ ಸಕ್ಕರೆ ಸೇವನೆಯನ್ನು ಬಿಡುವುದರಿಂದ ಇನ್ಸುಲಿನ್ ರೆಸಿಸ್ಟೆನ್ಸ್ ಅಥವಾ ಪ್ರಿ ಡಯಾಬಿಟೀಸ್ ಅನ್ನು ಸರಿಪಡಿಸಬಹುದು.
ದೇಹದ ತೂಕದಲ್ಲಿ ನಿಯಂತ್ರಣ
ಅಧಿಕ ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳು Empty ಕ್ಯಾಲೊರಿಗಳನ್ನು ಹೊಂದಿರುತ್ತವೆ ಮತ್ತು ಪ್ರೋಟೀನ್ ಮತ್ತು ಫೈಬರ್‌ನಂತಹ ಪೋಷಕಾಂಶಗಳು ಕಡಿಮೆ ಇರುತ್ತದೆ. ಹೆಚ್ಚು ಸಿಹಿಯಿಂದ ಕೂಡಿದ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ
ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮಗೆ ತಿಳಿದಿದೆ. ವಾಸ್ತವವಾಗಿ ಸಕ್ಕರೆ ಸೇವನೆಯು ಮಕ್ಕಳು ಮತ್ತು ವಯಸ್ಕರಲ್ಲಿ ಹಲ್ಲಿನ ಕುಳಿಗಳು (Cavities) ಮತ್ತು ವಸಡಿನ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಹಲ್ಲುಗಳಿಗೆ ಹಾನಿ ಮಾಡುವ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಆದ್ದರಿಂದ ಸಕ್ಕರೆಯನ್ನು ತ್ಯಜಿಸಿ ಹಲ್ಲಿನ ಸಮಸ್ಯೆಗಳಿಂದ ದೂರವಿರಬಹುದು.
ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು
ಹೆಚ್ಚಿನ ಸಕ್ಕರೆ ಆಹಾರಗಳು, ವಿಶೇಷವಾಗಿ ಹೆಚ್ಚಿನ ಫ್ರಕ್ಟೋಸ್ ಆಹಾರಗಳು ಮತ್ತು ಆಲ್ಕೊಹಾಲ್ ನಂತಹ ಸಕ್ಕರೆ ಪಾನೀಯಗಳು ಪಿತ್ತಜನಕಾಂಗದಲ್ಲಿನ ಕೊಬ್ಬಿನ (NAFLD) ಬೆಳವಣಿಗೆಯ ಅಪಾಯವನ್ನು ಹೆಚ್ಚಿಸಬಹುದು. ಅಲ್ಲದೆ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ. ಸಕ್ಕರೆ ಮತ್ತು ಫ್ರಕ್ಟೋಸ್ ಹೊಂದಿರುವ ಆಹಾರಗಳು ಮತ್ತು ಪಾನೀಯಗಳನ್ನು ಕಡಿಮೆ ಮಾಡುವುದರಿಂದ FAtty liver /ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಬಹುದು.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ಅಧಿಕ ರಕ್ತದೊತ್ತಡ, ಟ್ರೈಗ್ಲಿಸರೈಡ್ ಮತ್ತು LDL (ಕೆಟ್ಟ) ಕೊಲೆಸ್ಟರಾಲ್ ಮಟ್ಟಗಳು ಸೇರಿದಂತೆ ಹೃದ್ರೋಗದ ಅಪಾಯಕಾರಿ ಅಂಶಗಳಿಗೆ ಅಧಿಕ ಸಕ್ಕರೆ-ಭರಿತ ಆಹಾರಗಳ ಸೇವನೆ ಕಾರಣವಾಗಿದೆ. ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾದಲ್ಲಿ ಅದು ದೇಹದಲ್ಲಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಕೊಲೆಸ್ಟ್ರಾಲ್ ಶೇಖರಣೆ ಹೆಚ್ಚಾಗಿ ಹೃದ್ರೋಗಕ್ಕೆ ಕಾರಣವಾಗುತ್ತದೆ. ಸಕ್ಕರೆ ಕಡಿಮೆ ಮಾಡಿ ಇವೆಲ್ಲಾ ಸಮಸ್ಯೆಗಳಿಂದ ದೂರಾಗಿ ಆರೋಗ್ಯದಿಂದಿರಬಹುದು.
ನಿಮಗೆ ಸಿಹಿ ಬಿಡಲು ಹೆಚ್ಚು ಕಷ್ಟವೆನಿಸಿದರೆ ಈ ಕೆಳಗಿನ ಸಕ್ಕರೆಗೆ ಪರ್ಯಾಯ ಪದಾರ್ಥಗಳನ್ನು ಉಪಯೋಗಿಸಬಹುದು
ಸಕ್ಕರೆ ಸೇವನೆಯನ್ನು ಕಡಿಮೆ ಮಾಡಲು alternative products.
- ಸ್ಟೀವಿಯಾ, ಸುಕ್ರಲೋಸ್, ಆಸ್ಪರ್ಟೇಮ್ ಮುಂತಾದ ಕೃತಕ ಸಿಹಿ ಹೆಚ್ಚಿಸುವ ಪದಾರ್ಥಗಳು
- ಮಾಂಕ್ ಫ್ರೂಟ್ ಎಕ್ಸ್ಟ್ರಾಕ್ಟ್
- ಜೇನುತುಪ್ಪ
- ಕರ್ಜೂರದ ಸಿರಪ್
- ಮೊಲಾಸಸ್
- ಕರಿ ಬೆಲ್ಲ