ನಿಮಗೆ ಹೆಚ್ಚು ಮರೆವು ಆಗುತ್ತಿದೆಯೇ # ARE YOU BEING FORGETFUL

ನಿಮಗೆ ಹೆಚ್ಚು ಮರೆವು ಆಗುತ್ತಿದೆಯೇ # ARE YOU BEING FORGETFUL

ನಿಮಗೆ ಹೆಚ್ಚು ಮರೆವು ಆಗುತ್ತಿದೆಯೇ # ARE YOU BEING FORGETFUL

ಇದ್ದಕ್ಕಿದ್ದಂತೆ ವಿಷಯಗಳನ್ನು ನಾನು ಏಕೆ ಮರೆಯುತ್ತಿದ್ದೇನೆ ? ಇದು ಸಾಮಾನ್ಯವೇ ಅಥವಾ ಗಂಭೀರ ಸಮಸ್ಯೆಯೇ ? ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿದೆಯೇ ಹಾಗಾದರೆ ಮರೆವಿನ ಬಗ್ಗೆ  ಮಾಹಿತಿ ಮತ್ತು ಕೆಲವು ಸರಳ ಪರಿಹಾರಗಳ  ಬಗ್ಗೆ  ತಿಳಿದುಕೊಳ್ಳೋಣ .

ದಿನಕ್ಕೆ ಹತ್ತಾರು ಬಾರಿ ಉಪಯೋಗಿಸುವ ನಿಮ್ಮ ಕೀಗಳು ಅಥವಾ ಕನ್ನಡಕ ಎಲ್ಲಿ ಇಟ್ಟಿದ್ದೀನಿ ಎನ್ನುವುದನ್ನು ಮರೆತು ಹೊಗುತ್ತೀದ್ದೀರಾ? ಇಷ್ಟೇ ಅಲ್ಲ ನೀವು ಫ್ರಿಡ್ಜ್ ಡೋರ್‌ ತೆಗೆದ ಮೇಲೆ ಗೊಂದಲಕ್ಕೊಳಗಾಗುತ್ತಿದ್ದೀರ?  ಏನು ತೆಗೆದು ಕೊಳ್ಳಲು ಬಂದೆ ಎಂದು  ಮತ್ತು ಮನೆಯಿಂದ ಹೊರಟ ಮೇಲೆ ಮನೆ ಬಾಗಿಲಿಗೆ ಲಾಕ್‌ ಮಾಡಿದ್ದೀನೋ ಇಲ್ಲವೋ ಅಥವ ಸ್ಟವ್‌ ಆಫ್‌ ಮಾಡಿದ್ದೀನೊ ಇಲ್ಲವೋ ಎಂಬುದನ್ನು ದಾರಿ ಮಧ್ಯದಲ್ಲಿ ನೆನಪಿಸಿಕೊಳ್ಳುತ್ತಿದ್ದೀರಾ. ಅಲ್ಲವೇ !  ಯಾಕೆ ಹೀಗೆ ಆಗುತ್ತಿದೆ ಕಾರಣವೇನು ಎಂಬುದೇ ಎಲ್ಲರ ಕಳವಳದ ವಿಷಯವಾಗಿದೆ.

ಇಂತಹ ಮರೆವು ಇತ್ತಿಚಿನ ದಿನಗಳಲ್ಲಿ ಎಲ್ಲರಲ್ಲೂ ಸರ್ವೇ ಸಾಮಾನ್ಯವಾಗಿದೆ.  ಆತಂಕಕಾರಿ ವಿಶಯವೆಂದರೆ ಇತ್ತೀಚೆಗೆ ಮಕ್ಕಳಲ್ಲೂ ಈ ಸ್ಮರಣಶಕ್ತಿಯ ಕೊರತೆ ಕಾಣುತ್ತಿದೆ. ಇಂಥಹ ನೆನಪಿನ ಕೊರತೆಯು ಒತ್ತಡ, ಖಿನ್ನತೆ, ನಿದ್ರೆಯ ಕೊರತೆ ಅಥವಾ ಥೈರಾಯ್ಡ್ ಸಮಸ್ಯೆಗಳಿಂದ ಉಂಟಾಗಬಹುದು. ಇತರ ಕಾರಣಗಳೆಂದರೆ ಕೆಲವು ಔಷಧಿಗಳ ಅಡ್ಡಪರಿಣಾಮಗಳು, ಅನಾರೋಗ್ಯಕರ ಆಹಾರ, ನಿರ್ಜಲೀಕರಣ (ಹೆಚ್ಚು ನೀರು ಕುಡಿಯದೆ ಇರುವುದು).

ನಿಮ್ಮ ವಯಸ್ಸು ಎಷ್ಟೇ ಆಗಿರಲಿ ಹಲವಾರು ಕಾರಣಗಳು ಮರೆವಿನ ಸಮಸ್ಯೆಗಳನ್ನು ಉಂಟುಮಾಡಬಹುದು, ಅವುಗಳೆಂದರೆ

ನಿದ್ರೆಯ ಕೊರತೆ ;-

ಸಾಕಷ್ಟು ನಿದ್ದೆ ಮಾಡದಿರುವುದು ಮರೆವಿನ ಪ್ರಮುಖ ಕಾರಣವಾಗಿದೆ.  ತುಂಬಾ ಕಡಿಮೆ ಮತ್ತು ಶಾಂತ ನಿದ್ರೆಯ ಕೊರತೆಯು ನಮ್ಮ ಮನಸ್ಥಿತಿಯ ಬದಲಾವಣೆ ಮತ್ತು ಆತಂಕಕ್ಕೆ ಕಾರಣವಾಗಬಹುದು. ಇದು ನೆನಪಿನ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಔಷಧಿಗಳು :-

ಖಿನ್ನತೆ-ಶಮನಕಾರಿಗಳು, ಕೆಲವು ರಕ್ತದೊತ್ತಡ ಔಷಧಿಗಳು ಮತ್ತು ಇತರ ಔಷಧಿಗಳು ಸಾಮಾನ್ಯವಾಗಿ ನಮ್ಮ ದೇಹಕ್ಕೆ ಅಡ್ಡ ಪರಿಣಾಮಗಳನ್ನು ಉಂಟುಮಾಡುವ ಮೂಲಕ ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಯಾವುದೇ  ಔಷಧಿಯು ನಿಮ್ಮ ನೆನಪಿನ ಶಕ್ತಿಯನ್ನು ಕಡಿಮೆ ಮಾಡುತ್ತಿವೆ ಎಂದಾದರೆ ಕೂಡಲೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಪರ್ಯಾಯ ಔಷಧಿಯನ್ನು ಪಡೆಯಿರಿ.

ಥೈರಾಯ್ಡ್ :-

ಥೈರಾಯ್ಡ್ ಕಾಯಿಲೆಯು ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುವುದಲ್ಲದೆ, ನಿದ್ರೆಗೆ ಅಡ್ಡಿಪಡಿಸುತ್ತದೆ ಮತ್ತು ಖಿನ್ನತೆಗೆ ಕಾರಣವಾಗಬಹುದು. ನಿಮ್ಮ ಥೈರಾಯ್ಡ್ ಗ್ರಂಥಿಯು ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದೆಯೇ  ಇಲ್ಲವೇ ಎಂದು ಸರಳ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ .

ಆಲ್ಕೋಹಾಲ್ ಸೇವನೆ :-

ಹೆಚ್ಚು ಮದ್ಯಪಾನವು  ಸ್ಮರಣ ಶಕ್ತಿಯನ್ನು ಹಾಳುಮಾಡುತ್ತದೆ ಮತ್ತು ಹೊಸ ಮಾಹಿತಿ ಕೌಶಲ್ಯಗಳ ಕಡೆ ನಿಮಗೆ ಉತ್ಸಾಹ ಮೂಡದಂತೆ ಮಾಡುವುದಲ್ಲದೆ ಹಳೆಯ ನೆನಪನ್ನು ಮರುಪಡೆಯುವುದನ್ನು ಸಹ  ತಡೆಯುತ್ತದೆ.

ಖಿನ್ನತೆ :-

ನಮ್ಮಲ್ಲಿ ಖಿನ್ನತೆಯು ಹೆಚ್ಚಾದರೆ ಉಸಿರುಗಟ್ಟಿಸುವ ವಾತಾವರಣವನ್ನು ಮೂಡಿಸುತ್ತದೆ.  ಜೀವನದಲ್ಲಿ ನೆಡೆದ ಕೆಟ್ಟ ಅನುಭವಗಳು ಹಾಗು ಸನ್ನಿವೇಶಗಳಿಂದ ಹೊರ ಬರಲು ಬಿಡುವುದಿಲ್ಲ. ಇಂತಹ ಪರಿಸ್ಥಿತಿಗಳು ಕೂಡ ಸ್ಮರಣಶಕ್ತಿಯು ಕುಂದಲು ಕಾರಣವಾಗುತ್ತದೆ.

ಅನುವಂಶೀಯತೆ :-

ಸ್ಮರಣ ಶಕ್ತಿಯ ಕೊರತೆ ಅನುವಂಶಿಕವಾಗಿಯೂ ಬರಬಹುದು. ವಿಶೇಷವಾಗಿ ಗಂಭೀರ ನರವೈಜ್ಞಾನಿಕ  ಕಾಯಿಲೆಯಾದ ಆಲ್ಝೈಮರ್ ಕೂಡ ನೆನಪಿನ ಶಕ್ತಿಯ ನಷ್ಟದಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. ಆದರೂ ಒಳ್ಳೆಯ ಆಹಾರ ಮತ್ತು ಜೀವನ ಶೈಲಿಯು ನೆನಪಿನ ಶಕ್ತಿ ಹೆಚ್ಚಿಸುವಲ್ಲಿ  ಪ್ರಮುಖ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ತಿಳಿಸಿದೆ.

ನಿಮ್ಮ ನೆನಪಿನ ಶಕ್ತಿಯನ್ನು ಸ್ವಾಭಾವಿಕವಾಗಿ ಸುಧಾರಿಸಲು ಕೆಲವು ಮಾರ್ಗಗಳು ಇಲ್ಲಿವೆ

ಕಡಿಮೆ ಸಕ್ಕರೆಯನ್ನು ಸೇವಿಸಿ:-

ಹೆಚ್ಚು ಸಕ್ಕರೆಯನ್ನು ಸೇವಿಸುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮತ್ತು ನೆನಪಿನ ಶಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ. ಸಕ್ಕರೆಯಿಂದ ಕೂಡಿದ ಆಹಾರವು  ಮೆದುಳಿನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು  ಸಂಶೋಧನೆ ಸಹ ತಿಳಿಸುತ್ತದೆ.

ಮೀನಿನ ಎಣ್ಣೆಯ ಉಪಯೋಗ:-

ಮೀನಿನ ಎಣ್ಣೆಯು ಒಮೆಗಾ-3 ಕೊಬ್ಬಿನಾಮ್ಲಗಳಾದ ಐಕೋಸಾಪೆಂಟೆನೊಯಿಕ್ ಆಸಿಡ್ (ಇಪಿಎ) ಮತ್ತು ಡೊಕೊಸಾಹೆಕ್ಸೆನೊಯಿಕ್ ಆಸಿಡ್ (ಡಿಎಚ್‌ಎ) ನಿಂದ ಸಮೃದ್ಧವಾಗಿದೆ. ಈ ಕೊಬ್ಬುಗಳು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿವೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ. ಒತ್ತಡ ಮತ್ತು ಆತಂಕವನ್ನು ನಿವಾರಿಸುವುದಲ್ಲದೆ ಮಾನಸಿಕ ಆರೋಗ್ಯವನ್ನು ಸಹ ಸುಧಾರಿಸುತ್ತವೆ. ಮೀನು ಮತ್ತು ಮೀನಿನ ಎಣ್ಣೆಯ ಪೂರಕ  ಆಹಾರಗಳನ್ನು ಸೇವಿಸುವುದರಿಂದ  ಸ್ಮರಣ  ಶಕ್ತಿಯನ್ನು ಸುಧಾರಿಸಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ.

ಧ್ಯಾನ ಮಾಡುವುದು:-

ಧ್ಯಾನದ ಅಭ್ಯಾಸವು ಅನೇಕ ವಿಧಗಳಲ್ಲಿ ನಿಮ್ಮ  ಸಂಪೂರ್ಣ  ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸ್ಮರಣ ಶಕ್ತಿಯನ್ನು  ಸುಧಾರಿಸುತ್ತದೆ.

ತೂಕವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಿ:-

ಸರಿಯಾದ ದೇಹದ  ತೂಕವನ್ನು ಕಾಪಾಡಿಕೊಳ್ಳುವುದು  ಉತ್ತಮ ಆರೋಗ್ಯಕ್ಕೆ ಅಗತ್ಯ. ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲವಾದಲ್ಲಿ ಸ್ಥೂಲಕಾಯತೆಯು ನೆನಪಿನ ಶಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಸ್ಥೂಲಕಾಯತೆಯು ಇನ್ಸುಲಿನ್ ಪ್ರತಿರೋಧಕತೆ ಮತ್ತು ಉರಿಯೂತಕ್ಕೆ   ಕಾರಣವಾಗುತ್ತದೆ. ಅಲ್ಲದೆ ಮೆದುಳಿನಲ್ಲಿನ ಸ್ಮರಣ ಶಕ್ತಿಯ  ಜೀನ್‌ಗಳಿಗೆ ಬದಲಾವಣೆಗಳನ್ನು ಉಂಟುಮಾಡಿ ಋಣಾತ್ಮಕವಾಗಿ ಸ್ಮರಣೆಯ ಮೇಲೆ ಪರಿಣಾಮ ಬೀರುತ್ತದೆ.

ಸಾಕಷ್ಟು ನಿದ್ರೆ ಅವಶ್ಯಕ:-

ನಿದ್ರೆಯ ಕೊರತೆಯಿಂದಾಗಿ ನಿಮ್ಮ ಸ್ಮರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧನೆ ತೋರಿಸುತ್ತದೆ. ನೆನಪುಗಳು ರೂಪ ತಾಳುವಲ್ಲಿ  ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ವಯಸ್ಕರು ಮತ್ತು ಮಕ್ಕಳು ಪ್ರತಿ ರಾತ್ರಿ 7 ರಿಂದ 9 ಗಂಟೆಗಳ ನಿದ್ದೆ ಮಾಡಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ . ಸಾಕಷ್ಟು ನಿದ್ದೆ ಮಾಡುವುದರಿಂದ ನಮ್ಮ ನೆನಪುಗಳು ಬಲಗೊಳ್ಳುತ್ತವೆ.

ಸಾವಧಾನತೆಯನ್ನು ಅಭ್ಯಾಸ ಮಾಡಿ:-

ಮೈಂಡ್‌ಫುಲ್‌ನೆಸ್ ಒಂದು ಮಾನಸಿಕ ಸ್ಥಿತಿಯಾಗಿದ್ದು, ಇದು ನಿಮ್ಮ ಪ್ರಸ್ತುತ ಪರಿಸ್ಥಿತಿಯ ಮೇಲೆ  ನಿಮ್ಮ ಗಮನವನ್ನು ಕೇಂದ್ರೀಕರಿಸುವಂತಹದ್ದಾಗಿದೆ. ಮೈಂಡ್‌ಫುಲ್‌ನೆಸ್ ಅನ್ನು ಅಭ್ಯಾಸ ಮಾಡುವುದರಿಂದ  ಒತ್ತಡ ಕಡಿಮೆಯಾಗುತ್ತದೆ,  ಏಕಾಗ್ರತೆ ಹೆಚ್ಚುತ್ತದೆ ಮತ್ತು ಮನಸ್ಸು

ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಮಿತಿಗೊಳಿಸಿ:-

ಕೇಕ್‌, ಬಿಸ್ಕೆಟ್‌, ಕುಕೀಸ್, ಪಾಸ್ತಾ, ಪೀಝಾ, ಬಿಳಿ ಅಕ್ಕಿ ಮತ್ತು ಬಿಳಿ ಬ್ರೆಡ್‌ನಂತಹ ಹೆಚ್ಚಿನ ಪ್ರಮಾಣದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದು ಸ್ಮರಣ ಹಾನಿಗೆ ಕಾರಣವಾಗಬಹುದು. ಈ ಆಹಾರಗಳು ಹೆಚ್ಚಿನ ಗ್ಲೈಸೆಮಿಕ್  ಅಂಶವನ್ನು  ಹೊಂದಿರುತ್ತವೆ, ಆದ್ದರಿಂದ ದೇಹವು ಈ ಕಾರ್ಬೋಹೈಡ್ರೇಟ್‌ಗಳನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.

ಇಂತಹ  ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಪಾಶ್ಚಿಮಾತ್ಯ ಆಹಾರದ ಸೇವನೆಯು ಬುದ್ಧಿಮಾಂದ್ಯತೆ, ನೆನಪಿನ ಶಕ್ತಿಯ ಅವನತಿ ಯಂತಹ ಸಮಸ್ಯೆಗೆ ಕಾರಣವಾಗುತ್ತದೆ.

ವ್ಯಾಯಾಮ :-

ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಮುಖ್ಯವಾಗಿದೆ. ಇದು ಮೆದುಳನ್ನು  ಚುರುಕಾಗಿಸುತ್ತದೆ. ಅನೇಕ ಅಧ್ಯಯನಗಳು ಹೇಳುವಂತೆ ವ್ಯಾಯಾಮವು ನ್ಯೂರೋಪ್ರೊಟೆಕ್ಟಿವ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಪ್ರೋಟೀನ್‌ಗಳು ಮತ್ತು ನ್ಯೂರಾನ್‌ಗಳ ಬೆಳವಣಿಗೆಯನ್ನು ಸುಧಾರಿಸುತ್ತದೆ ಮತ್ತು ಮೆದುಳಿನ ಆರೋಗ್ಯಕ್ಕೆ ಕಾರಣವಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ  ನಿಯಮಿತ ವ್ಯಾಯಾಮವನ್ನು ಅಭ್ಯಾಸ ಮಾಡುವುದರಿಂದ ನಂತರದ ಜೀವನದಲ್ಲಿ ನೆನಪಿನ  ಶಕ್ತಿಯ  ನಷ್ಟದಂತಹ ಅಪಾಯವನ್ನು ಕಡಿಮೆ ಮಾಡಬಹುದು.

ಸಲಹೆ :-

ಸಾಂದರ್ಭಿಕ ಮರೆವು ಜೀವನದ ಸಾಮಾನ್ಯ ಭಾಗವಾಗಿದೆ. ಏಕೆಂದರೆ ಮೆದುಳು ತುಂಬಾ ಅವಶ್ಯಕವಿರುವ ವಿಷಯಗಳನ್ನು ಬಿಟ್ಟು  ಅನವಶ್ಯಕ ವಿಚಾರಗಳನ್ನು ತೆಗೆದುಹಾಕಿಬಿಡುತ್ತದೆ. ನಮಗೆ ವಯಸ್ಸಾದಂತೆ ಮರೆವು ಸಹ ಹೆಚ್ಚಾಗುತ್ತಾ ಹೋಗುತ್ತದೆ. ಇಂತಹ ಸ್ಮರಣಶಕ್ತಿಯ ಕೊರತೆಯ ಬಗ್ಗೆ ಅನೇಕ ಜನರು ಚಿಂತಿಸುತ್ತಾರೆ. ಅಲ್ಲದೆ ಆಲ್ಝೈಮರ್ ಕಾಯಿಲೆ, ಮೆದುಳಿನ ಕಾಯಿಲೆಯಂತಹ ಗಂಭೀರ ಕಾಯಿಲೆಗೆ ತುತ್ತಾಗಿದ್ದೀವಿ ಎಂದು ಭಯಪಡುತ್ತಾರೆ. ಚಿಂತಿಸುವುದರಿಂದ ಇದು ಇನ್ನಷ್ಟು ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಆದರೆ ಅತಿ ಹೆಚ್ಚು ಮರೆವು ಇದ್ದು ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯುಂಟಾಗುತ್ತಿದ್ದರೆ  ಇಂತಹ ಸಂದರ್ಭದಲ್ಲಿ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

 

 

 

best web company in tumkur

Ayushmanbhava Karnataka

error: Content is protected !!